ADVERTISEMENT

ಕಣ್ವಕುಪ್ಪೆ ಗವಿಮಠ: ಸಮಭ್ರಮದ ಗವಿ ಶಾಂತಲಿಂಗೇಶ್ವರ ರಥೋತ್ಸವ  

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:25 IST
Last Updated 16 ಜನವರಿ 2026, 5:25 IST
 ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಗುರುವಾರ ಗವಿ  ಶಾಂತಲಿಂಗೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
 ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಗುರುವಾರ ಗವಿ  ಶಾಂತಲಿಂಗೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.   

ಕಣ್ವಕುಪ್ಪೆ ಗವಿಮಠದ ಗವಿ ಶಾಂತಲಿಂಗೇಶ್ವರ ಸ್ವಾಮಿ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ರಥೋತ್ಸವದಲ್ಲಿ ಭಾಗವಹಿಸುವ ಮೂಲಕ ತಮ್ಮ ಭಕ್ತಿಯನ್ನು ಮೆರೆದರು.

ಕಣ್ವಕುಪ್ಪೆ ಗವಿಮಠದ ಪಿಠಾಧಿಪತಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಮಕರ ಸಂಕ್ರಾಂತಿ ಯಂದು ನಡೆಯುವ ರಥೋತ್ಸವವು ಪೂಜಾ ವಿಧಿ ವಿಧಾನಗಳ ಮೂಲಕ ನೇರವೇರಿತು.

ADVERTISEMENT

ಗುರುವಾರ ಮುಂಜಾನೆ ಧನುರ್ಮಾಸ ಪೂಜಾ ಮಂಗಲ ಕಾರ್ಯ ಮತ್ತು ಸಂಕ್ರಾಂತಿ ವಿಶೇಷ ಪೂಜಾ ಕಾರ್ಯದ ನಂತರ ಬ್ರಾಹ್ಮಿ ಮುಹೂರ್ತದಲ್ಲಿ ಗಂಗಾ ಪೂಜೆ ಮಾಡಲಾಯಿತು. ಕಣ್ವಕುಪ್ಪೆ ಶ್ರೀಗಳು ಪಂಚಾಚಾರ್ಯ ಧ್ವಜಾರೋಹಣ ,ಲಿಂಗೈಕ್ಯರ ಕರ್ತೃ ಗದ್ದುಗೆಗಳಿಗೆ ರುದ್ರಾಭಿಷೇಕ ,ಬಿಲ್ವಾರ್ಚನೆ ಮಹಾಮಂಗಳಾರತಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ರಥಕ್ಕೆ ಪೂಜಾ ಕಾರ್ಯ ಮಾಡಿದ ನಂತರ ಗವಿ ಶ್ರೀ ಶಾಂತಲಿಂಗೇಶ್ವರ ಮಹಾ ರಥೋತ್ಸವಕ್ಕೆ ಭಕ್ತರು ಚಾಲನೆ ನೀಡಿದರು.

ಶಾಸಕ ಬಿ.ದೇವೇಂದ್ರಪ್ಪ,ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ,ಎಚ್.ಪಿ.ರಾಜೇಶ್, ಮುಖಂಡರಾದ ಕೆ.ಪಿ. ಪಾಲಯ್ಯ, ಬಿಸ್ತುವಳ್ಳಿ ಬಾಬು ಸೇರಿದಂತೆ ಹವಲರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.