ADVERTISEMENT

ಹರಿಹರ: ಸಿದ್ಧಗಂಗಾ ರೈಲಿನಲ್ಲಿ ರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 4:38 IST
Last Updated 28 ನವೆಂಬರ್ 2025, 4:38 IST
ಹರಿಹರದಲ್ಲಿ ಸಿದ್ಧಗಂಗಾ ಇಂಟರ್‌ಸಿಟಿ ರೈಲಿನ ಡಿ–6 ಬೋಗಿಯಲ್ಲಿ ಪ್ರಯಾಣಿಕರು ರಾಜ್ಯೋತ್ಸವ ಆಚರಿಸಿದರು
ಹರಿಹರದಲ್ಲಿ ಸಿದ್ಧಗಂಗಾ ಇಂಟರ್‌ಸಿಟಿ ರೈಲಿನ ಡಿ–6 ಬೋಗಿಯಲ್ಲಿ ಪ್ರಯಾಣಿಕರು ರಾಜ್ಯೋತ್ಸವ ಆಚರಿಸಿದರು   

ಹರಿಹರ: ಸಿದ್ಧಗಂಗಾ ಇಂಟರ್‌ಸಿಟಿ ರೈಲಿನ ಡಿ–6 ಬೋಗಿಯ ಪ್ರಯಾಣಿಕರು ಗುರುವಾರ ಬೆಳಿಗ್ಗೆ ಕರ್ನಾಟಕ ರಾಜ್ಯೋತ್ಸವ ಆಚರಿಸಿದರು.

ಪ್ರತಿದಿನ ಡಿ-6 ಬೋಗಿಯಲ್ಲಿ ಪ್ರಯಾಣಿಸುವ ಗೆಳೆಯರ ಬಳಗವಾದ ಹರಿಹರದ ರಾಜಶೇಖರಮೂರ್ತಿ ನೇತೃತ್ವದ ‘ರೈಲು ಮಜಾ ಟಾಕೀಸ್ ಸಾಂಸ್ಕೃತಿಕ ವೇದಿಕೆ’ಯಿಂದ ಓಡುತ್ತಿದ್ದ ರೈಲಿನಲ್ಲೇ ಸಡಗರದಿಂದ ರಾಜ್ಯೋತ್ಸವ ಆಚರಿಸುವ ಮೂಲಕ ಪ್ರಯಾಣಿಕರಿಗೆ ವಿಶಿಷ್ಟ ಅನುಭವ ನೀಡಲಾಯಿತು.

ಆರಂಭದಲ್ಲಿ ವೇದಿಕೆಯ ಸದಸ್ಯರು ಸಾಮೂಹಿಕವಾಗಿ ನಾಡಗೀತೆ ಹಾಡಿ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ನಿವೃತ್ತ ಸದಸ್ಯರು ಹಾಗೂ ಗೆಳೆಯರನ್ನು ಸನ್ಮಾನಿಸಲಾಯಿತು. 

ADVERTISEMENT

ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು. ಪ್ರಯಾಣದ ವೇಳೆ ಪಾಲಿಸಬೇಕಾದ ನಿಯಮಗಳು ಮತ್ತು ಜಾಗೃತಿ ಮಾಹಿತಿಯುಳ್ಳ ಭಿತ್ತಿಪತ್ರಗಳನ್ನು ಹಂಚಲಾಯಿತು. ಬಳಗದ ಅಧ್ಯಕ್ಷ ರಾಜಶೇಖರಮೂರ್ತಿ ಅವರು, ಕಾರ್ಯಕ್ರಮಕ್ಕೆ ಸಹಕರಿಸಿದ ಗೆಳೆಯರು ಹಾಗೂ ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.