ADVERTISEMENT

ದಾವಣಗೆರೆ | ಎಲೆಕ್ಟ್ರಿಕ್, ಅಶ್ವಮೇಧ ಬಸ್‌ಗಳ ಸಂಚಾರ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:38 IST
Last Updated 5 ಆಗಸ್ಟ್ 2025, 6:38 IST
   

ದಾವಣಗೆರೆ: ಸಾರಿಗೆ ಮುಷ್ಕರದ ಪರಿಣಾಮ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬಸ್ ಸೌಲಭ್ಯ ಸಿಗದೇ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳು ಪರದಾಡಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಮುಷ್ಕರದ ಅರಿವಿಲ್ಲದೇ ಬಂದಿರುವ ಪ್ರಯಾಣಿಕರು ಬಸ್‌ಗೆ ಕಾಯುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಕೆಲವೇ ನಗರಗಳಿಗೆ ಬಸ್ ಸೇವೆ ಒದಗಿಸುತ್ತಿವೆ.

ಬಸ್ ಸಂಚಾರ ತಡೆಯಲು ಪ್ರಯತ್ನಿಸಿದ ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಅಧ್ಯಕ್ಷ ಎಚ್.ಜಿ.ಉಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಒತ್ತಾಯ ಪೂರ್ವಕವಾಗಿ ಬಸ್ ಸಂಚಾರ ತಡೆಯುವ ಯತ್ನವನ್ನು ವಿಫಲಗೊಳಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.

ADVERTISEMENT

ಬೆಳಿಗ್ಗೆ 11 ಗಂಟೆಯವರೆಗೆ 239 ಟ್ರಿಪ್‌ಗಳ ಪೈಕಿ 84 ಟ್ರಿಪ್ ಬಸ್ ಸೇವೆ ಒದಗಿಸಿವೆ. ಕೆಎಸ್‌ಆರ್‌ಟಿಸಿ ಬಸ್‌ಗೆ ಪರ್ಯಾಯವಾಗಿ ಖಾಸಗಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಎಲೆಕ್ಟ್ರಿಕ್ ಹಾಗೂ ಅಶ್ವಮೇಧ ಬಸ್‌ಗಳು ಸಂಚರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.