ADVERTISEMENT

'ವೈಭವದ ಹೆಳವನಕಟ್ಟೆ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ'

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:54 IST
Last Updated 3 ಅಕ್ಟೋಬರ್ 2025, 5:54 IST
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಧಾರ್ಮಿಕದತ್ತಿ ಇಲಾಖೆಗೆ  ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ವಿಜಯದಶಮಿ ಬ್ರಹ್ಮ ರಥೋತ್ಸವ   ಗುರುವಾರ ವೈಭವದಿಂದ ಜರುಗಿತು.
ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಧಾರ್ಮಿಕದತ್ತಿ ಇಲಾಖೆಗೆ  ಹೆಳವನಕಟ್ಟೆ ಲಕ್ಷ್ಮೀರಂಗನಾಥ ಸ್ವಾಮಿ ವಿಜಯದಶಮಿ ಬ್ರಹ್ಮ ರಥೋತ್ಸವ   ಗುರುವಾರ ವೈಭವದಿಂದ ಜರುಗಿತು.   

ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಧಾರ್ಮಿಕದತ್ತಿ ಇಲಾಖೆಗೆ ಸೇರಿದ ಹರಿಹರಾತ್ಮಕ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ವಿಜಯದಶಮಿ ‘ಬ್ರಹ್ಮ ರಥೋತ್ಸವ’ ಗುರುವಾರ ವೈಭವದಿಂದ ಜರುಗಿತು.

ದೇವಾಲಯ ಆವರಣದಲ್ಲಿ ಬ್ರಾಹ್ಮಿ ಮುಹೋರ್ತದಲ್ಲಿ ಶ್ರೀದೇವಿ–ಭೂದೇವಿಯೊಂದಿಗೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ನಡೆಯಿತು.

ಗಜೇಂದ್ರಮೋಕ್ಷದ ನಂತರ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದ ಗ್ರಾಮ ಪ್ರದಕ್ಷಿಣೆ ಮಾಡಲಾಯಿತು.

ADVERTISEMENT

ಲೋಕಕಲ್ಯಾಣಾರ್ಥವಾಗಿ ದೇವಾಲಯದ ಯಾಗಶಾಲೆಯಲ್ಲಿ ರಥಶಾಂತಿ, ಶ್ರೀಚಕ್ರ ಪೂಜೆ, ಶಾಂತಿ ಹೋಮ ಹವನ. ಅಷ್ಟ ದಿಕ್ಪಾಲಕರಿಗೆ ಬಲಿ ತ್ರಿರಾತ್ರಾಗಮೋಕ್ತ ಪ್ರಕಾರ ನಡೆಯಿತು.

ರಾಷ್ಟ್ರಾಶೀರ್ವಾದ, ಮಂತ್ರಪುಷ್ಪ, ವಿಪ್ರ ಸಮುದಾಯದವರ ವೇದಘೋಷ, ಮಂಗಳಾಷ್ಟಕಗಳ ಪಠಣದ ಮಧ್ಯೆ ಉತ್ಸವಮೂರ್ತಿ ರಥಾರೋಹಣವಾಯಿತು.

ಅರ್ಚಕರು, ಆಗಮಿಕರು, ಮುಜರಾಯಿ ಇಲಾಖೆ ಸಿಬ್ಬಂದಿ, ಮುಜರಾಯಿ ಶಾನುಭೋಗರು, ಉಪಾಧಿವಂತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಭಕ್ತರು ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿದರು.‘ಹರಹರ ಮಹಾದೇವ’, ‘ಲಕ್ಷ್ಮೀ ರಮಣ’, ‘ಇಂದಿರಾರಮಣ’, ‘ರಮಾರಮಣ ಗೋವಿಂದ’ ಉದ್ಘೋಷದೊಂದಿಗೆ ತೇರು ಎಳೆದರು.

ಮಂಗಳವಾದ್ಯ, ತಮಟೆ ಮೇಳ ಹಾಗೂ ಜಾಂಚ್‌ ಮೇಳ ವಿಪ್ರ ಸಮೂಹದ ವೇದ ಘೋಷ ಮೆರಗು ತಂದಿದ್ದವು.

ರಥದಲ್ಲಿನ ಉತ್ಸವಮೂರ್ತಿಗೆ ಬನ್ನಿಪತ್ರೆ, ಹೂ, ಧ್ವಜ ಪತಾಕೆಗಳಿಂದ ರಥ ಹಾಗೂ ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.

ದೇವಾಲಯದವರು ದಾನಿಗಳ ಸಹಾಯದಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆ ಭಕ್ತರು ಆಗಮಿಸಿದ್ದರು.

ಜನತೆ ಬನ್ನಿಪತ್ರೆ ಪಡೆದು ಪರಸ್ಪರ ವಿನಿಮಯ ಮಾಡಿಕೊಂಡು ಶುಭಕೋರಿದರು.

ಪೊಲೀಸರು ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.