ADVERTISEMENT

ಬಸವಾಪಟ್ಟಣ: ಅಡಿಕೆ ತೋಟದ ತಂತಿಬೇಲಿಗೆ ಸಿಲುಕಿ ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 10:59 IST
Last Updated 21 ಫೆಬ್ರುವರಿ 2026, 10:59 IST
<div class="paragraphs"><p>ಅಡಿಕೆ ತೋಟದ ತಂತಿಬೇಲಿಗೆ ಸಿಲುಕಿ ಚಿರತೆ ಸಾವು</p></div>

ಅಡಿಕೆ ತೋಟದ ತಂತಿಬೇಲಿಗೆ ಸಿಲುಕಿ ಚಿರತೆ ಸಾವು

   

ಬಸವಾಪಟ್ಟಣ (ದಾವಣಗೆರೆ): ಇಲ್ಲಿಗೆ ಸಮೀಪದ ನಿಲೋಗಲ್‌ ಗ್ರಾಮದಲ್ಲಿ ಅಡಿಕೆ ತೋಟದ ಸುತ್ತ ಅಳವಡಿಸಿದ್ದ ತಂತಿಬೇಲಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟಿದೆ.

ರೈತ ಜಿ. ರಂಗನಗೌಡ ಎಂಬುವವರ ತೋಟದಲ್ಲಿ ಚಿರತೆ ಮೃತಪಟ್ಟಿದೆ. ಸ್ಥಳ ಮಹಜರು ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಸಾವಿನ ಕುರಿತು ತನಿಖೆ ಕೈಗೊಂಡಿದ್ದಾರೆ.

ADVERTISEMENT

ರಂಗನಗೌಡ ಅವರ ಪುತ್ರ ಶನಿವಾರ ಬೆಳಿಗ್ಗೆ ತೋಟಕ್ಕೆ ತೆರಳಿದಾಗ ಚಿರತೆಯೊಂದು ತಂತಿಬೇಲಿಗೆ ಸಿಲುಕಿಕೊಂಡಿದ್ದು ಗಮನಕ್ಕೆ ಬಂದಿದೆ. ಅವರು ತಕ್ಷಣ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದಿಂದ ಅರಿವಳಿಕೆ ತಜ್ಞರನ್ನು ಕರೆಸುವ ಪ್ರಯತ್ನದಲ್ಲಿದ್ದಾಗ ಚಿರತೆ ಮೃತಪಟ್ಟಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.