ಹೊನ್ನಾಳಿ: ಇಲ್ಲಿನ ಗುರುಕುಲ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಮೋಘ ಎಚ್.ಪಿ ಅವರು ಪರಿಸರಕ್ಕೆ ಸಂಬಂಧಿಸಿದಂತೆ ರಚಿಸಿದ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿಕೊಂಡು ಪ್ರಶಂಸನಾ ಪತ್ರ ಕಳುಹಿಸಿದ್ದಾರೆ.
ಪ್ರಧಾನಿ ಕಾರ್ಯಾಲಯಕ್ಕೆ ಅಮೋಘ ಈಚೆಗೆ ಚಿತ್ರವನ್ನು ಕಳುಹಿಸಿದ್ದ. ಬಾಲಕನ ಕಲಾ ಅಭಿರುಚಿಯನ್ನು ಗುರುತಿಸಿ, ಆತನ ವಿಳಾಸಕ್ಕೆ ಮೆಚ್ಚುಗೆಯ ಪತ್ರವನ್ನು ಕಳುಹಿಸಿರುವ ಪ್ರಧಾನಿ ಕಾರ್ಯಾಲಯದ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಉದ್ಯಮಿ ಭರತ್ ಎಚ್.ಪಿ. ಮತ್ತು ಚಂದನ ಜಿ.ಪಿ ದಂಪತಿಯ ಪುತ್ರ ಅಮೋಘ ಅವರಿಗೆ ಸಹಪಾಠಿ ಆದ್ಯ ಅವರು ಚಿತ್ರ ರಚನೆಯಲ್ಲಿ ನೆರವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.