ADVERTISEMENT

ಜಿಲ್ಲೆಯಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 16:30 IST
Last Updated 30 ಜುಲೈ 2020, 16:30 IST
ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ಗುರುವಾರ ಸುರಿದ ಮಳೆಗೆ ಮುಖ್ಯರಸ್ತೆಯಲ್ಲಿ ನೀರು ನಿಂತಿತ್ತು 
ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ಗುರುವಾರ ಸುರಿದ ಮಳೆಗೆ ಮುಖ್ಯರಸ್ತೆಯಲ್ಲಿ ನೀರು ನಿಂತಿತ್ತು    

ದಾವಣಗೆರೆ: ಜಿಲ್ಲೆಯಲ್ಲಿ ಕೆಲವೆಡೆ ಗುರುವಾರ ಸಾಧಾರಣ ಮಳೆಯಾಗಿದೆ.

ದಾವಣಗೆರೆ ನಗರ, ಚನ್ನಗಿರಿಯಲ್ಲಿ ಸಾಧಾರಣ ಮಳೆಯಾಗಿದ್ದರೆ, ಸಂತೇಬೆನ್ನೂರು, ಮಲೇಬೆನ್ನೂರಿನಲ್ಲಿ ಜಡಿ ಮಳೆಯಾಗಿದೆ. ನ್ಯಾಮತಿ, ಹೊನ್ನಾಳಿ, ಸಾಸ್ವೆಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.

ಮಳೆ ವಿವರ:ಜಿಲ್ಲೆಯಲ್ಲಿ ಬುಧವಾರ 17.0 ಮೀ.ಮೀ ಮಳೆಯಾಗಿದೆ. ದಾವಣಗೆರೆ ತಾಲ್ಲೂಕು– 13.0 ಮೀ.ಮೀ., ಚನ್ನಗಿರಿ–7.0 ಮೀ.ಮೀ., ಹರಿಹರ–7.0 ಮೀ.ಮೀ., ಹೊನ್ನಾಳಿ–11.0 ಮೀ.ಮೀ., ಜಗಳೂರು– 44.0 ಮೀ.ಮೀ., ನ್ಯಾಮತಿ–8.0 ಮೀ.ಮೀ. ಮಳೆಯಾಗಿದೆ.

ADVERTISEMENT

ದಾವಣಗೆರೆ ತಾಲ್ಲೂಕಿನಲ್ಲಿ 4 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು,₹ 20,800 ನಷ್ಟ ಸಂಭವಿಸಿದೆ. 4 ಎಕರೆ ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದು ₹ 60,000 ನಷ್ಟವಾಗಿದೆ. ಚನ್ನಗಿರಿ ಯಲ್ಲಿ 1 ಎಕರೆ ಮೆಕ್ಕೆಜೋಳ ಹಾನಿಯಾಗಿದ್ದು ₹ 30,000 ನಷ್ಟ ಸಂಭವಿಸಿದೆ. ಜಗಳೂರಿನಲ್ಲಿ 12 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ₹ 80,000 ಹಾಗೂ 35 ಎಕರೆ ಮೆಕ್ಕೆಜೋಳ, ಶೇಂಗಾ ಬೆಳೆ ಹಾನಿ ಯಾಗಿದ್ದು ₹ 1.20 ಲಕ್ಷ ನಷ್ಟ ಸಂಭವಿ ಸಿದೆ.ಜಿಲ್ಲೆಯಲ್ಲಿ ಒಟ್ಟು₹ 3,10,800 ನಷ್ಟ ಸಂಭವಿಸಿದ್ದು, ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.