ಮಲೇಬೆನ್ನೂರು: ಈಗಿನ ದಿನಗಳಲ್ಲಿ ಕೃಷಿಕ ಸಮುದಾಯದ ವರನಿಗೆ ಕನ್ಯೆ ನೀಡಲು ಪಾಲಕರು ಹಿಂಜರಿಕೆ ತೋರಬಾರದು ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಸಲಹೆ ನೀಡಿದರು.
ಪಟ್ಟಣದ ಜೋಡಿ ಆಂಜನೇಯ ಸ್ವಾಮಿ ದೇವಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಿವಾಹದ ಮುಖ್ಯ ಉದ್ದೇಶ ಕೌಟುಂಬಿಕ ವ್ಯವಸ್ಥೆ ಕಾಪಾಡುವುದು. ನಿಮ್ಮ ಮಕ್ಕಳಿಗೆ ಸಂಸ್ಕಾರ ನೀಡಿ’ ಎಂದು ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಅಡಿಯಿಟ್ಟ ಜೋಡಿಗಳಿಗೆ ಅವರು ಸೂಚಿಸಿದರು.
ನವಜೋಡಿಗಳು ಸರಳ ಕಾಯಕ ಜೀವನ ನಡೆಸಿ, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಬಸವಮೂರ್ತಿ ಗುಂಡಯ್ಯ ಸ್ವಾಮೀಜಿ ಹೇಳಿದರು.
ಜನಜಾಗೃತಿ ಸಮಿತಿ ಸದಸ್ಯ ಪಟೇಲ್ ಮಂಜುನಾಥ್, ಬಿಜೆಪಿ ಮುಖಂಡ ಹನಗವಾಡಿ ವೀರೇಶ್, ಕಾಂಗ್ರೆಸ್ ಮುಖಂಡ ಬಿ.ಎಂ. ವಾಗೀಶ್ ಸ್ವಾಮಿ, ವೀರಯ್ಯ ಸ್ವಾಮಿ ಮಾತನಾಡಿದರು.
ಗೋದೂಳಿ ಸಮಯದಲ್ಲಿ ಆಂಜನೇಯ ಸ್ವಾಮಿ ಹೂವಿನ ರಥದ ಉತ್ಸವ, ಜೋಡೆತ್ತಿನ ಮೆರವಣಿಗೆ ಜರುಗಿತು.
ಐರಣಿ ಅಣ್ಣೇಶ್, ಪುರಸಭೆ ಸದಸ್ಯರಾದ ಸಾಬೀರ್ ಅಲಿ, ಮಂಜುನಾಥ್, ಬೋವಿ ಕುಮಾರ್ ಇದ್ದರು. ಕಣ್ಣಾಳ್ ಧರ್ಮಣ್ಣ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಸ್ವಾಗತಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.