
ಪ್ರಜಾವಾಣಿ ವಾರ್ತೆಮಲೇಬೆನ್ನೂರು: ಸಮೀಪದ ಕುಣಿಬೆಳಕೆರೆ ಗ್ರಾಮದಲ್ಲಿ ಬುಧವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿದೆ.
ಕನ್ನಪ್ಪರ ಚಿಕ್ಕಣ್ಣ ಅವರು ಕಳೆದ ವಾರ ಕಣದಲ್ಲಿ 6 ಎಕರೆ ಹುಲ್ಲಿನ ಬಣವೆ ಹಾಕಿದ್ದರು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಸುಟ್ಟ ವಾಸನೆ ಹೊಗೆ ಹರಡುತ್ತಿದ್ದಂತೆ ಯುವಕರು ಜಮಾಯಿಸಿ ಬೆಂಕಿ ನಂದಿಸಲು ಯತ್ನಿಸಿದರು. ಅಂದಾಜು ₹ 40,000 ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ಅಂದಾಜಿಸಿದರು.
ಹರಿಹರದಿಂದ ಬಂದ ಅಗ್ನಿ ಶಾಮಕ ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸಿ, ಹರಡುವುದನ್ನು ತಪ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.