ADVERTISEMENT

ಗಾಂಜಾ ಮತ್ತಿನಲ್ಲಿ ಹಣ ದೋಚುತ್ತಿದ್ದ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 6:30 IST
Last Updated 4 ಮಾರ್ಚ್ 2021, 6:30 IST

ನ್ಯಾಮತಿ: ತಾಲ್ಲೂಕಿನ ಹೊಸಜೋಗ ಗ್ರಾಮದ ಬಸ್‌ ನಿಲ್ದಾಣದ ಬಳಿ ವಾಹನಗಳ ತಪಾಸಣೆ ಮಾಡುತ್ತಿರುವಾಗ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಐವರಲ್ಲಿ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ ಆಮ್ನಿ, ಚಾಕು ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಶಿವಮೊಗ್ಗ ತಾಲ್ಲೂಕಿನ ನಾರಾಯಣಪುರದ ಲೋಹಿತನಾಯ್ಕ, ಗಾಡಿಕೊಪ್ಪದ ಕಿರಣನಾಯ್ಕ, ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದ ಶ್ರೀನಾಥನಾಯ್ಕ ಮತ್ತು ಸಂತೋಷ ಅವರು ಪರಾರಿಗೆ ಯತ್ನಿಸಿದ್ದು, ಕಿರಣನಾಯ್ಕ ಮತ್ತು ಶ್ರೀನಾಥ ನಾಯ್ಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಗಾಂಜಾ ಸೇವಿಸಿದ್ದು, ಮತ್ತಿನಲ್ಲಿ ಸಾರ್ವಜನಿಕರನ್ನು ದೋಚುವ ಯೋಜನೆ ರೂಪಿಸಿರುವುದಾಗಿ ಬಂಧಿತರು ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ ₹ 1,200 ಬೆಲೆಯ ಗಾಂಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಮತಿ ಸಬ್‌ ಇನ್‌ಸ್ಪೆಕ್ಟರ್ ಪಿ.ಎಸ್. ರಮೇಶ ತಿಳಿಸಿದ್ದಾರೆ.

ADVERTISEMENT

ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ ನೇತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ ಎನ್. ರವಿನಾಯಕ, ಚಂದ್ರಶೇಖರಪ್ಪ, ರಮೇಶ, ಕೆ.ಆರ್. ರಾಮಪ್ಪ, ಕೆ.ಬಿ. ವಿಜಯ್ ಕಾರ್ಯಾಚರಣೆ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.