ADVERTISEMENT

ಶಾಂತಿ, ಪ್ರೀತಿ, ಕ್ಷಮೆಯಿಂದ ಬಾಳೋಣ: ಕ್ರಿಸ್‌ಮಸ್‌ ಪ್ರಯುಕ್ತ ಧರ್ಮಗುರುಗಳ ಸಂದೇಶ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 11:13 IST
Last Updated 24 ಡಿಸೆಂಬರ್ 2019, 11:13 IST
ಕ್ರಿಸ್‌ಮಸ್ ಅಂಗವಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ದಾವಣಗೆರೆಯ ಸಂತ ಥೋಮಸರ ಚರ್ಚ್‌ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್
ಕ್ರಿಸ್‌ಮಸ್ ಅಂಗವಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ದಾವಣಗೆರೆಯ ಸಂತ ಥೋಮಸರ ಚರ್ಚ್‌ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್   

ದಾವಣಗೆರೆ: ದೇವರು ಮನುಷ್ಯರಾಗಿ ಲೋಕಕ್ಕೆ ಬಂದ ದಿನವೇ ಕ್ರಿಸ್‌ಮಸ್‌. ಕ್ರಿಸ್ತರ ಜನನವಾದ ದಿನವೇ ಕ್ರಿಸ್‌ಮಸ್‌. ದೇವರು ಮನುಷ್ಯರನ್ನು ತುಂಬಾ ಪ್ರೀತಿಸಿದರು. ಅದಕ್ಕಾಗಿ ತನ್ನ ಏಕೈಕ ಮಗನನ್ನೇ ಲೋಕಕ್ಕೆ ಧಾರೆ ಎರೆದ ದಿನ ಇದು.

ದೇವರು ಸೃಷ್ಟಿಯ ಮುಕುಟವನ್ನಾಗಿ (ಕ್ರೌನ್‌ ಆಫ್‌ ಕ್ರಿಯೇಶನ್‌) ಮಾಡಿದ್ದಾನೆ. ದೇವರಿಗೆ ಅವಿಧೇಯನಾಗುತ್ತಾನೆ. ದೇವರ ವಿರುದ್ಧ ನಡೆದುಕೊಂಡ ಮೇಲೆ ಪಾಪದ ಕೂಪದಲ್ಲಿ ಬೀಳುತ್ತಾನೆ. ದೇವರಿಂದ ದೂರ ಸರಿಯುತ್ತಾನೆ. ಇಲ್ಲಿ ದೇವರು ವಿಶ್ವಾಸಕ್ಕೆ ಅರ್ಹರಾಗಿದ್ದರು. ಜನರು ವಿಶ್ವಾಸ ಘಾತುಕರಾಗಿದ್ದರು. ದೇವರು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರು. ಆದರೆ ಜನರನ್ನು ಸರಿದರಿಗೆ ತರಲು ಪ್ರಯತ್ನಿಸಿದರು. ಆಗಲಿಲ್ಲ. ಆಗ ತನ್ನ ಏಕೈಕ ಮಗನನ್ನು ಲೋಕಕ್ಕೆ ಕಳುಹಿಸಲು ನಿರ್ಧರಿಸಿದರು. ಅದನ್ನು ಡಿವೈನ್‌ ಹಗ್‌ ಫ್ರಮ್‌ ಗಾಡ್‌ (ದೈವಿಕ ಅಪ್ಪುಗೆ)ಎಂದು ಕರೆಯುತ್ತೇವೆ. ಅಂದರೆ ದೇವರು ಮನುಷ್ಯನನ್ನು ಅಪ್ಪಿಕೊಂಡರು.

ದೇವರು ದೇವರಾಗಿಯೇ ಲೋಕಕ್ಕೆ ಬರಲಿಲ್ಲ. ದೀನರಲ್ಲಿ ದೀನರಾಗಿ ಬರುತ್ತಾರೆ. ಗೋದಳಿಯಲ್ಲಿ ಜನಿಸಿದರು. ಅವರಿಗೆ ಬಂಗಲೆಯಲ್ಲಿ ಹುಟ್ಟಬಹುದಿತ್ತು. ಹುಟ್ಟಲಿಲ್ಲ. ಅವರು ನಮ್ಮಲ್ಲಿ ಒಬ್ಬರಾಗಲು ಬಯಸಿದರು. ಅದನ್ನೇ ನಮ್ಮಲ್ಲಿ ಇಮ್ಮಾನುವೆಲ್‌ ಎಂದು ಕರೆಯಲಾಯಿತು. ಅಂದರೆ ದೇವರು ನಮ್ಮೊಡನೆ ಇದ್ದಾರೆ ಎಂದರ್ಥ. ಹಸುಗಳು ಇರುವಂಥ ಜಾಗವನ್ನು ಗೋದಳಿ ಎಂದು ಕರೆಯುತ್ತೇವೆ. ದೀನರಲ್ಲಿ ದೀನರಾಗಿ, ಬಡವರಲ್ಲಿ ಬಡವರಾಗಿ ನಮ್ಮಲ್ಲೊಬ್ಬರಾಗಿ ಮನುಷ್ಯನನ್ನು ‍ಪಾಪದ ಕೂಪದಿಂದ ಮೇಲೆತ್ತಲು ಗೋದಳಿಯಲ್ಲಿ ಜನಿಸಿದರು.

ADVERTISEMENT

ದೇವರು ಮನುಷ್ಯನಾಗಿ ಶಾಂತಿಯ ಕುವರನಾಗಿ (ಪ್ರಿನ್ಸ್‌ ಆಫ್‌ ಪೀಸ್‌) ಬಂದರು. ಪ್ರಸ್ತುತ ಜಗತ್ತಿನಲ್ಲಿ ಶಾಂತಿ ಕದಡಿದೆ. ಇಂಥ ಸಂದರ್ಭದಲ್ಲಿ ಶಾಂತಿದೂತನಾಗಿ ಪ್ರಭು ಏಸುಕ್ರಿಸ್ತರು ಬರುತ್ತಿದ್ದಾರೆ. ಅಶಾಂತಿ ಇದ್ದಲ್ಲಿ ಶಾಂತಿ, ದ್ವೇಷ ಇದ್ದಲ್ಲಿ ಪ್ರೀತಿ, ಅಕ್ಷಮ್ಯ ಇದ್ದಲ್ಲಿ ಕ್ಷಮೆ ಕೊಡಲು ಬರುತ್ತಿದ್ದಾರೆ.

ಶಾಂತಿಯ ಅರಸ ಬರುವಾಗ ಜನರಲ್ಲಿ ಕೇಳುವುದು ಇಷ್ಟೇ. ಯಾವುದೇ ಕಚ್ಚಾಟ, ಜಗಳ, ವಂಚನೆ ಅಥವಾ ಸಮಸ್ಯೆಗಳನ್ನು ಬದಿಗೊತ್ತಿ ದೇವರ ಮಕ್ಕಳೆಂದು ಜೀವಿಸಿ ಎಂಬುದೇ ನಮ್ಮ ಸಂದೇಶ. ಯಾರೂ ಮೇಲು ಕೀಳಲ್ಲ. ದೇವರ ಸೃಷ್ಟಿಯಾದ ನಾವು ದೇವರ ಶಾಂತಿಯನ್ನು ಆಲಿಸೋಣ. ಶಾಂತಿ, ಪ್ರೀತಿ, ಕ್ಷಮೆ ಬದುಕಾಗಲಿ.

(ಲೇಖಕರು: ಸಂತ ಥೋಮಸರ ದೇವಾಲಯದ ಗುರುಗಳು)

(ನಿರೂಪಣೆ: ಬಾಲಕೃಷ್ಣ ಪಿ.ಎಚ್‌.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.