ADVERTISEMENT

ಮಾಯಕೊಂಡ: ಕನಕದಾಸ ಜಯಂತಿ, ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 4:50 IST
Last Updated 25 ನವೆಂಬರ್ 2025, 4:50 IST
ಮಾಯಕೊಂಡದ ರಾಜ ಹಿರೇಮದಕರಿ ನಾಯಕರ ಸಮಾಧಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಮಾಯಕೊಂಡದ ರಾಜ ಹಿರೇಮದಕರಿ ನಾಯಕರ ಸಮಾಧಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಮಾಯಕೊಂಡ: ರಾಜ ವೀರ ಹಿರೇಮದಕರಿ ನಾಯಕರ ಸಮಾಧಿ ಸ್ಥಳ ಜೀರ್ಣೋದ್ಧಾರ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಕನಕದಾಸ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ನಿವೃತ್ತ ನ್ಯಾಯಾಧೀಶ ಈಶ್ವರ ಜಂತಲಿ, ‘ರಾಜ್ಯೋತ್ಸವ ಹಾಗೂ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಜಾತಿ ಕಟ್ಟುಪಡುಗಳಿಂದ ಹೊರಗಿಡಬೇಕು’ ಎಂದರು. 

‘ಸಮಾಜದಲ್ಲಿ ಸಮಾನತೆಯನ್ನು ಸಾರಿದ್ದರಿಂದ ದಾಸ ಶ್ರೇಷ್ಠರ ಹೆಸರು ಶಾಶ್ವತವಾಗಿ ಉಳಿದಿದೆ. ಇಲ್ಲಿನ ಮದಕರಿ ನಾಯಕರ ಸಮಾಧಿ ಸ್ಥಳ ವೀರ ಭೂಮಿಯಾಗಿದ್ದು, ಈ ಸ್ಥಳದ ಅಭಿವೃದ್ಧಿ ಆಗಬೇಕಿದೆ’ ಎಂದು ಕಾಂಗ್ರೆಸ್‌ ಎಸ್‌ಟಿ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಐಗೂರು ಹನುಮಂತಪ್ಪ ಅಭಿಪ್ರಾಯಪಟ್ಟರು.

ADVERTISEMENT

ಸಂಡೂರ್ ರಾಜಶೇಖರ್, ಉಪನ್ಯಾಸಕ ಮಹಾಂತೇಶ್ ಬಿ.ಆರ್, ಜಿ. ಜಗದೀಶ್, ಗ್ರಾ.ಪಂ. ಸದಸ್ಯ ಗೋಣಿವಾಡ ಮಂಜಣ್ಣ, ಸದಸ್ಯರಾದ ನರಗನಹಳ್ಳಿ ಶಿವಕುಮಾರ್, ವಗ್ಗಪ್ಪರ ಮಲ್ಲಪ್ಪ, ಕಂದಗಲ್ಲು ಚಂದ್ರಣ್ಣ, ಮುಖಂಡರಾದ ಉಮಾಪತಿ ಎಚ್. ಕೃಷ್ಣಮೂರ್ತಿ ಮಾತನಾಡಿದರು.

ಪ್ರಬಂಧ ಸ್ಪರ್ಧೆ ವಿಜೇತರನ್ನು ಅಭಿನಂದಿಸಲಾಯಿತು. ಸಮಿತಿ ಅಧ್ಯಕ್ಷ ಸುನೀಲ್ ನಿರೂಪಿಸಿದರು, ಅವಿನಾಶ್, ಜಯಣ್ಣ, ರವಿ, ವಕೀಲೆ ರಶ್ಮಿ, ಎಂ.ಜಿ. ಗುರುನಾಥ್, ಗಂಗಾಧರಪ್ಪ, ಕನ್ನಡ ಯುವ ಶಕ್ತಿ ಕೇಂದ್ರದ ಲಕ್ಷ್ಮಣ್, ಹಾಲೇಶ್, ಕೋಡಿಹಳ್ಳಿ ಹನುಮಂತಪ್ಪ, ನಿಂಗಣ್ಣ, ವಿಜಯಸಾರಥಿ, ಬಸವರಾಜ್, ಗೌಡರ ನಟರಾಜ್, ರಾಮಣ್ಣ, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.