ಮಾಯಕೊಂಡ: ಗ್ರಾಮದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ನ ಶಾಖೆ ತೆರೆಯುವಂತೆ ಒತ್ತಾಯಿಸಿ ಮಾಯಕೊಂಡ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಬಿ. ಮಲ್ಲೇಶ್ ನೇತೃತ್ವದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾಯಕೊಂಡ ಗ್ರಾಮವು ವಿಧಾನಸಭಾ ಕ್ಷೇತ್ರ ಹಾಗೂ ಹೋಬಳಿ ಕೇಂದ್ರವಾಗಿದ್ದು, ಇಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ರೈತರೇ ಹೆಚ್ಚು ಸಂಖ್ಯೆಯಲ್ಲಿದ್ದು, ಸಂಘದ ವ್ಯವಹಾರಕ್ಕೆ ದೂರದ ಬಾಡಾ ಗ್ರಾಮದ ಸಹಕಾರ ಸಂಘದ ಬ್ಯಾಂಕ್ ಶಾಖೆಯನ್ನೇ ಅವಲಂಬಿಸಬೇಕಾಗಿದೆ. ಗ್ರಾಮದಲ್ಲಿ ಸಹಕಾರ ಸಂಘದ ಬ್ಯಾಂಕ್ ಶಾಖೆ ತೆರೆಯುವುದರಿಂದ ಈ ಭಾಗದ ರೈತರಿಗೆ ಅನುಕೂಲ ಆಗಲಿದೆ ಎಂದು ಜಿ.ಬಿ. ಮಲ್ಲೇಶ್ ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೋಗುಂಡೆ ಬಕ್ಕೇಶ್, ಮಾಯಕೊಂಡ ಕೃಷಿ ಪತ್ತಿನ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿಗೆ ಸಹಕಾರ ಬ್ಯಾಂಕ್‌ನ ಅಗತ್ಯ ಇರುವುದು ಗಮನಕ್ಕೆ ಬಂದಿದೆ. ಆದಷ್ಟು ಶೀಘ್ರವೇ ಬ್ಯಾಂಕ್ ಶಾಖೆ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಜಿಲ್ಲಾ ಸಹಕಾರ ಸಂಘದ ನಿರ್ದೇಶಕ ಶೇಖರಪ್ಪ, ಮಾಯಕೊಂಡ ಸಹಕಾರ ಸಂಘದ ಕಾರ್ಯದರ್ಶಿ ಹನುಮಂತಪ್ಪ, ನಿರ್ದೇಶಕರಾದ ಗೌಡರ ಅಶೋಕ್, ಗಂಟೆಪ್ಳರ ಬಾಲರಾಜ್, ಭೀಮರಾಜ್, ದ್ವಾರಕೀಶ್, ಗಂಗಾಧರ್, ಮಾಲತೇಶ್, ನಾಗಪ್ಪ, ಶ್ರೀನಿವಾಸ್, ಸಿಬ್ಬಂದಿ ಪ್ರಭು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.