ADVERTISEMENT

ಹರಿಹರ: ಕಟ್ಟಡ ಕಾರ್ಮಿಕರಿಗೆ ಸಂಚಾರಿ ಆರೋಗ್ಯ ಘಟಕಕ್ಕೆ ಶಾಸಕ ಬಿ.ಪಿ.ಹರೀಶ್ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:22 IST
Last Updated 4 ಆಗಸ್ಟ್ 2025, 6:22 IST
<div class="paragraphs"><p>ಹರಿಹರದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸಂಚಾರಿ ಆರೋಗ್ಯ ಘಟಕಕ್ಕೆ ಶಾಸಕ ಬಿ.ಪಿ.ಹರೀಶ್ ಶನಿವಾರ ಚಾಲನೆ ನೀಡಿದರು</p></div>

ಹರಿಹರದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸಂಚಾರಿ ಆರೋಗ್ಯ ಘಟಕಕ್ಕೆ ಶಾಸಕ ಬಿ.ಪಿ.ಹರೀಶ್ ಶನಿವಾರ ಚಾಲನೆ ನೀಡಿದರು

   

ಹರಿಹರ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಸಂಚಾರಿ ಆರೋಗ್ಯ ಘಟಕಕ್ಕೆ ಶಾಸಕ ಬಿ.ಪಿ.ಹರೀಶ್ ಶನಿವಾರ ನಗರದಲ್ಲಿ ಚಾಲನೆ ನೀಡಿದರು.

ಕಾರ್ಮಿಕ ಕಲ್ಯಾಣ ಮಂಡಳಿಯ ಈ ಯೋಜನೆಯಿಂದ ಅಸಂಘಟಿತ ಕಾರ್ಮಿಕರಿಗೆ ಅವರ ಮನೆ ಸಮೀಪವೇ ಆರೋಗ್ಯ ಸೇವೆ ದೊರೆಯುತ್ತದೆ. ಅಧಿಕಾರಿಗಳು ಲೋಪ ಮಾಡದೇ ಯೋಜನೆಯನ್ವಯ ಎಲ್ಲಾ ಅಗತ್ಯ ಆರೋಗ್ಯ ಸೇವೆಗಳನ್ನು ಕಾರ್ಮಿಕರಿಗೆ ಒದಗಿಸಬೇಕು ಎಂದು ಸೂಚಿಸಿದರು. 

ADVERTISEMENT

ಹರಿಹರ ಮತ್ತು ಹೊನ್ನಾಳಿ ತಾಲ್ಲೂಕಿಗೆ ವಾರದಲ್ಲಿ ತಲಾ ಮೂರು ದಿನ ಸಂಚಾರಿ ಘಟಕದ ಸೇವೆ ದೊರೆಯಲಿದೆ. ಒಬ್ಬ ವೈದ್ಯ, ಒಬ್ಬ ಶುಶ್ರೂಷಕಿ, ಪ್ರಯೋಗಾಲಯದ ಸಿಬ್ಬಂದಿ ಇಲ್ಲಿ ಇರುತ್ತಾರೆ. ಪ್ರಯೋಗಾಲಯದಲ್ಲಿ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಪ್ರಮಾಣದ ಪರೀಕ್ಷೆಯನ್ನು ಮಾಡಲಾಗುತ್ತದೆ. ಅಗತ್ಯ ಇರುವರಿಗೆ ಇಂಜೆಕ್ಷನ್, ಔಷಧಿ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ತಾಲ್ಲೂಕು ಅಥವಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ ಎಂದು ಕಾರ್ಮಿಕ ನಿರೀಕ್ಷಕಿ ಜೆ.ಕವಿತಾ ಕುಮಾರಿ ಮಾಹಿತಿ ನೀಡಿದರು.

ಹರಿಹರೇಶ್ವರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಎಚ್.ಭೀಮಣ್ಣ, ಗೌರವಾಧ್ಯಕ್ಷ ಕೊಕ್ಕನೂರು ಮಂಜಪ್ಪ, ಉಪಾಧ್ಯಕ್ಷ ಎಚ್.ಅಂಜನಪ್ಪ, ಕಾರ್ಯದರ್ಶಿ ಹನುಮಂತಪ್ಪ, ಖಜಾಂಚಿ ಚಾಕಣಿ ರೇವಣಪ್ಪ, ಹಮೀದ್ ಸಾಬ್ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.