ADVERTISEMENT

ಶಾಸಕ ಶಾಮನೂರು ಶಿವಶಂಕರಪ್ಪ ಜನ್ಮದಿನ

ಗಣ್ಯರಿಂದ ಶುಭಾಶಯಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 14:20 IST
Last Updated 16 ಜೂನ್ 2019, 14:20 IST
ಶಾಮನೂರು ಶಿವಶಂಕರಪ್ಪ ಅವರು ಜನ್ಮದಿನದ ಪ್ರಯಕ್ತ ಮಹಾನಗರ ಪಾಲಿಕೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನ್ನದಾನ ಮಾಡಿದರು
ಶಾಮನೂರು ಶಿವಶಂಕರಪ್ಪ ಅವರು ಜನ್ಮದಿನದ ಪ್ರಯಕ್ತ ಮಹಾನಗರ ಪಾಲಿಕೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನ್ನದಾನ ಮಾಡಿದರು   

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ 89ನೇ ಜನ್ಮದಿನದ ಪ್ರಯುಕ್ತ ವಿವಿಧ ಗಣ್ಯರು, ವಿವಿಧ ಸಂಘಟನೆಗಳ ಸದಸ್ಯರು ಎಸ್.ಎಸ್.ಮಲ್ಲಿಕಾರ್ಜುನ ಅವರ ನಿವಾಸದಲ್ಲಿ ಭಾನುವಾರ ಶುಭಾಶಯ ಕೋರಿದರು.

ಎಸ್.ಎಸ್. ಅವರ ಮಕ್ಕಳಾದ ಮಂಜುಳಾ, ಶೈಲಜಾ, ಸುಧಾ, ಮೀನಾ ಹಾಗೂ ಎಸ್.ಎಸ್. ಗಣೇಶ್, ಎಸ್.ಎಸ್. ಬಕ್ಕೇಶ್, ಡಾ. ಎಸ್.ಬಿ.ಮುರುಗೇಶ್ ಸೇರಿ ಕುಟುಂಬದ ಸದಸ್ಯರು ವಿದೇಶ ಪ್ರವಾಸದಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ ದಂಪತಿ ದೂರವಾಣಿ ಮೂಲಕ ಶುಭಾಶಯ ತಿಳಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಷಡಾಕ್ಷರಿ ಸ್ವಾಮಿ, ದಾವಣಗೆರೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ದಂಪತಿ,
ಹರಿಹರ ಶಾಸಕ ಎಸ್.ರಾಮಪ್ಪ, ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ್, ದಾವಣಗೆರೆ ತಹಶೀಲ್ದಾರ್ ಸಂತೋಷ್ ಕುಮಾರ್, ದುಡಾ ಆಯುಕ್ತ ಆದಪ್ಪ, ಪೋಲಿಸ್ ಇಲಾಖೆಯ ಡಿವೈಎಸ್ಪಿ ನಾಗರಾಜ್, ಸಿಪಿಐಗಳಾದ ಉಮೇಶ್, ಆನಂದ್, ಪಿಎಸ್‍ಐಗಳಾದ ವೀರಬಸಪ್ಪ, ಸತೀಶ್, ಇಮ್ರಾನ್, ನಿರ್ಮಿತಿ ಕೇಂದ್ರದ ರವಿ, ಶಿವಕುಮಾರ್, ಕೆಆರ್‍ಐಡಿಎಲ್‍ನ ಚಂದ್ರಶೇಖರ್, ಉಮೇಶ್ ಪಾಟೀಲ್, ನಿರಂಜನ್, ಪಾಲಿಕೆಯ ಉಪ ಆಯುಕ್ತ ರವೀಂದ್ರ ಮಲ್ಲಾಪುರ, ಡಿಎಚ್ಒ ಡಾ.ತ್ರಿಪುಲಾಂಬ, ಸಿ.ಜಿ.ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ, ಬಾಪೂಜಿ ಆಸ್ಪತ್ರೆಯ ನಿರ್ದೇಶಕ ಡಾ.ಧನಂಜಯ, ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದ ಡಾ. ಕಾಳಪ್ಪನವರ್, ಡಾ.ಪ್ರಸಾದ್, ಡಾ.ಅರುಣಕುಮಾರ್, ಕೆ.ಇಮಾಂ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ಶುಭಾಶಯ ತಿಳಿಸಿದರು.

ADVERTISEMENT

ಎಪಿಎಂಸಿ ಅಧ್ಯಕ್ಷ ಬೀಸಲೇರಿ ಈರಣ್ಣ, ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ನಿವೃತ್ತ ಪೋಲೀಸ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ನಗರ ದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳ ಸಮಿತಿಯವರು, ತಂಜೀಮುಲ್ ಮುಸ್ಲೀಮಿನ್ ಕಮಿಟಿಯ ಅಧ್ಯಕ್ಷ ಸಾಧೀಕ್ ಪೈಲ್ವಾನ್, ಮಾಜಿ ಅಧ್ಯಕ್ಷ ಸೈಯದ್ ಸೈಪುಲ್ಲಾ, ಸಾಯಿಬಾಬಾ ದೇವಸ್ಥಾನ ಸಮಿತಿ, ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ನಾಗೇಂದ್ರಪ್ಪ ಹಾಗೂ ವಿವಿಧ ಸಂಘಟನೆಯ ಸದಸ್ಯರು ಶುಭಾಶಯ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.