ADVERTISEMENT

ಮೋದಿ ಪ್ರಧಾನ ಮಂತ್ರಿಯಲ್ಲ ಪ್ರಚಾರ ಮಂತ್ರಿ: ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್‌ ಟೀಕೆ

ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 11:03 IST
Last Updated 10 ಏಪ್ರಿಲ್ 2019, 11:03 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

ದಾವಣಗೆರೆ: ಮಾರುಕಟ್ಟೆ ಮನುಷ್ಯ ಆಗಿರುವ ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿ ಅಲ್ಲ. ಪ್ರಚಾರ ಮಂತ್ರಿ ಆಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟೀಕಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಪ್ರಚಾರ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಕೊಡುತ್ತೇನೆ. ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕುತ್ತೇನೆ ಎಂದೆಲ್ಲ 2014ರಲ್ಲಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಮೋದಿ ಈಗ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಸೈನಿಕರ ಮುಖನೋಡಿ ಓಟು ಹಾಕಿ ಎಂದು ಹೇಳುತ್ತಿದ್ದಾರೆ ಎಂದು ಟೀಕೀಸಿದರು.

ADVERTISEMENT

ಚೌಕೀದಾರ್‌ ಅಲ್ಲ ಭಾಗೀದಾರ್‌: ಮನೆ ಕಾಯಲು ಚೌಕೀದಾರ್ ಇದ್ದಾಗಲೂ ಕಳ್ಳತನವಾದರೆ ಎರಡು ಕಾರಣಗಳು ಇರುತ್ತವೆ. ಚೌಕೀದಾರ್‌ ತನ್ನ ಕರ್ತವ್ಯ ನಿರ್ವಹಿಸದೇ ಇರುವುದು ಒಂದಾದರೆ, ಕಳ್ಳರ ಜತೆ ಭಾಗಿಯಾಗಿ ಕಳ್ಳತನಗೆ ಸಹಕಾರ ನೀಡುವುದು ಇನ್ನೊಂದು. ಮೋದಿ ಮಾಡಿದ್ದು ಎರಡನೇಯದ್ದು. ಹಾಗಾಗಿ ಮೋದಿ ಚೌಕೀದಾರ್‌ ಅಲ್ಲ, ಭಾಗೀದಾರ್‌. ಯಾಕೆಂದರೆ ಇಲ್ಲಿನ ಬ್ಯಾಂಕ್‌ಗಳಿಗೆ ಲಕ್ಷ ಕೋಟಿ ರೂಪಾಯಿ ವಂಚಿಸಿ ದೇಶ ಬಿಟ್ಟು ಓಡಿ ಹೋದವರೆಲ್ಲ ಮೋದಿಯ ಸ್ನೇಹಿತರು ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.