ADVERTISEMENT

ಹರಿಹರ: ಮೊಹರಂ; ಶೋಕಾಚರಣೆಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 5:20 IST
Last Updated 7 ಜುಲೈ 2025, 5:20 IST
ಹರಿಹರದಲ್ಲಿ ಭಾನುವಾರ ಮೊಹರಂ ಹಬ್ಬದ ನಿಮಿತ್ತ ಮುಸ್ಲಿಂ ಶಿಯಾ ಪಂಗಡದವರು ಶೋಕಾಚರಣೆಯ ಮೆರವಣಿಗೆ ಮಾಡಿದರು
ಹರಿಹರದಲ್ಲಿ ಭಾನುವಾರ ಮೊಹರಂ ಹಬ್ಬದ ನಿಮಿತ್ತ ಮುಸ್ಲಿಂ ಶಿಯಾ ಪಂಗಡದವರು ಶೋಕಾಚರಣೆಯ ಮೆರವಣಿಗೆ ಮಾಡಿದರು   

ಹರಿಹರ: ತಾಲ್ಲೂಕಿನಾದ್ಯಂತ ಭಾನುವಾರ ಮುಸ್ಲಿಂ ಸಮುದಾಯದವರು ಮೊಹರಂ ಹಬ್ಬ ಆಚರಿಸಿದರು. 

ಇಸ್ಲಾಂ ಧರ್ಮದ ಇತಿಹಾಸದಲ್ಲಿ ಬರುವ ಪ್ರಸಂಗದಂತೆ ಪ್ರವಾದಿ ಮೊಹಮ್ಮದರ ಮೊಮ್ಮಗ ಹಜರತ್ ಇಮಾಮ್ ಹುಸೇನ್ ಮತ್ತು ಅವರ ಸಂಗಡಿಗರು ಕರ್ಬಲ ಎಂಬಲ್ಲಿ ನಡೆದ ಯುದ್ಧವೊಂದರಲ್ಲಿ ಹತರಾಗುತ್ತಾರೆ. ಅವರ ಬಲಿದಾನವನ್ನು ಸ್ಮರಿಸುವುದು ಈ ಹಬ್ಬದ ತಿರುಳಾಗಿದೆ. 

ಮುಸ್ಲಿಂ ಸಮುದಾಯದ ಸುನ್ನಿ ಪಂಗಡದವರು ವಿಶೇಷ ಪ್ರಾರ್ಥನೆ, ಪ್ರವಚನ, ಜಾಗರಣೆ, ಪಾನಕ ವಿತರಣೆಯ ಮೂಲಕ ಹಬ್ಬ ಆಚರಿಸಿದರು. ಮುಸ್ಲಿಂ ಸಮುದಾಯದ ಶಿಯಾ ಪಂಗಡದವರು ಸಂಜೆ ಟಿಪ್ಪುನಗರದಿಂದ ನದಿಯವರೆಗೆ ಮೆರವಣಿಗೆ ನಡೆಸಿದರು. 

ADVERTISEMENT

ಹಲವರು ಶನಿವಾರ ಮತ್ತು ಭಾನುವಾರ ಉಪವಾಸ ಆಚರಿಸಿದರು. ಮುಸ್ಲಿಮರೇ ಇಲ್ಲದ ಕೆಲವೆಡೆ ಗುಂಡಿಯಲ್ಲಿ ಬೆಂಕಿ ಹಾಕಿ ಕೆಂಡ ತುಳಿದರು. ದಾಟಿದರು. ಮುಸ್ಲಿಮರಿಲ್ಲದ ನಾಗೇನಹಳ್ಳಿ ಹಾಗೂ ನಂದಿಗಾವಿ ಗ್ರಾಮಗಳಲ್ಲಿ ಹಿಂದೂ ಸಮುದಾಯದವರೇ ಮೊಹರಂ ಆಚರಿಸಿದರು.

ಹರಿಹರ: ಹರಿಹರದಲ್ಲಿ ಭಾನುವಾರ ಮೊಹರಂ ಹಬ್ಬದ ನಿಮಿತ್ತ ಮುಸ್ಲಿಮ್ ಶಿಯಾ ಪಂಗಡದವರು ಶೋಕಾಚರಣೆಯ ಮೆರವಣಿಗೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.