
ದಾವಣಗೆರೆ: ಪೋಕ್ಸೊ ಮೊದಲ ಪ್ರಕರಣದಲ್ಲಿ ಆರೋಪಮುಕ್ತರಾಗಿ ಚಿತ್ರದುರ್ಗದಿಂದ ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರಕ್ಕೆ ಶಿವಮೂರ್ತಿ ಮುರುಘಾ ಶರಣರು ಆಗಮಿಸಿದರು.
ಬಳಿಕ ಶಿವಯೋಗಿ ಮಂದಿರದ ಆವರಣದಲ್ಲಿರುವ ಅಥಣಿ ಶಿವಯೋಗಿ ಸ್ವಾಮೀಜಿ ಹಾಗೂ ಜಯದೇವ ಸ್ವಾಮೀಜಿ ಅವರ ಗದ್ದುಗೆಗೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಇನ್ನೂ ಒಂದಷ್ಟು ದಿನ ಮೌನ ಕಾಪಾಡಿಕೊಳ್ಳಬೇಕಿದೆ. ಮಾತನಾಡುವ ಸಂದರ್ಭ ಕಡಿಮೆ ಇದೆ. ಅಧಿಕೃತವಾಗಿ ಪತ್ರಿಕಾಗೋಷ್ಠಿ ಕರೆದು ಮಾಹಿತಿ ಹಂಚಿಕೊಳ್ಳುವೆ’ ಎಂದು ಹೇಳಿದರು. ಸುದ್ದಿಗಾರರ ಎಲ್ಲಾ ಪ್ರಶ್ನೆಗಳಿಗೂ ‘ನೋ ಕಾಮೆಂಟ್ಸ್’ ಎಂದಷ್ಟೇ ಪ್ರತಿಕ್ರಿಯಿಸಿದರು.
ಶರಣರು ಆಗಮಿಸುವುದಕ್ಕೂ ಮುನ್ನ ಮಠದ ಆವರಣದಲ್ಲಿದ್ದ ಭಕ್ತರು ಜೈಕಾರ ಕೂಗಿದರು. ಶರಣರು ಆಗಮಿಸಿದ ಬಳಿಕ ಸ್ಥಳದಲ್ಲಿದ್ದ ಮುಖಂಡರು ಜೈಕಾರ ಕೂಗದಂತೆ ತಡೆದರು. ಭಕ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.