ಚಳ್ಳಕೆರೆ: ಯುಗಾದಿ ಹಬ್ಬದ ಮೂರನೇ ದಿನ ಮಂಗಳವಾರ ಇಲ್ಲಿನ ಅಜ್ಜನಗುಡಿ ರಸ್ತೆ ಬಳಿ ಮಟನ್– ಚಿಕನ್ ಖರೀದಿಗಾಗಿ ಮಂಗಳವಾರ ಮಾರುಕಟ್ಟೆಗೆ ಒಮ್ಮೆಲೆ ನೂರಾರು ಜನ ಮುಗಿಬಿದ್ದ ಕಾರಣ ನೂಕುನುಗ್ಗಲು ಉಂಟಾಯಿತು.
ಬೆಳಿಗ್ಗೆ 6ಕ್ಕೆ ಜನರು ಬ್ಯಾಗ್ ಹಿಡಿದು ಮಾರುಕಟ್ಟೆ ಮುಂದೆ ಸಾಲಾಗಿ ನಿಂತಿದ್ದರು. ಮಟನ್ ಕೊರತೆ ಉಂಟಾಗಿದ್ದರಿಂದ ಕೆಲ ವರ್ತಕರು ಅಂಗಡಿಗಳ ಬಾಗಿಲು ಮುಚ್ಚಿದರು.
ಹೀಗಾಗಿ, ಕೆಲ ಗ್ರಾಹಕರು, ತಾಲ್ಲೂಕಿನ ವರವು, ಪರಶುರಾಂಪುರ, ದೊಡ್ಡೇರಿ, ಕಾಟಪ್ಪನಹಟ್ಟಿ, ನನ್ನಿವಾಳ, ಲಕ್ಷ್ಮೀಪುರ ಮುಂತಾದ ಗ್ರಾಮಗಳಿಗೆ ಹೋಗಿ ಮಟನ್ ಖರೀದಿಸಿದರು.
ಮಟನ್ ಸಿಗದಿರುವ ಕಾರಣ ಕೊನೆ ಹಬ್ಬ ಬುಧವಾರ ಆಚರಿಸಿದರಾಯಿತು ಎಂದು ಕೆಲವರು ನಿರಾಸೆಯಿಂದ ಮನೆಗೆ ಮರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.