ಮಾಯಕೊಂಡ: ನ್ಯಾನೊ ಯೂರಿಯಾ, ನ್ಯಾನೊ ಡಿಎಪಿ ಬಳಸಿ ಮಣ್ಣಿನ ಆರೋಗ್ಯ ಕಾಪಾಡಬಹುದು. ಇದರಿಂದ ರೈತರಿಗೂ ಹೆಚ್ಚು ಲಾಭ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
ಸಮೀಪದ ತುಂಬಿಗೆರೆ ಗ್ರಾಮದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಮೆಕ್ಕೆಜೋಳ ಬೆಳೆಗೆ ಡ್ರೋನ್ ಮೂಲಕ ನ್ಯಾನೊ ಯೂರಿಯಾ ಸಿಂಪರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹರಳು ರೂಪದ ಯೂರಿಯಾ ಶೇ 60ರಷ್ಟು ಮಾತ್ರ ಬೆಳೆಗಳಿಗೆ ಸಿಗುತ್ತದೆ. ಆದರೆ ನ್ಯಾನೊ ಯೂರಿಯಾ ಫಲಿತಾಂಶ ಶೇ 80ರಷ್ಟಿದೆ. ಡ್ರೋನ್ ಮೂಲಕ ಸಿಂಪಡಿಸಲು ಹತ್ತು ನಿಮಿಷ ಸಾಕಾಗುತ್ತದೆ ಎಂದರು.
‘ಈ ಬಾರಿ ನಮ್ಮ ಮಠದ ಜಮೀನಿನಲ್ಲಿಯೇ ನ್ಯಾನೊ ಯೂರಿಯಾ ಬಳಸಿದ್ದು, ಬೆಳೆಗಳು ಉತ್ಕೃಷ್ಟವಾಗಿವೆ’ ಎಂದು ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.
ಹರಳು ರೂಪದ ಯೂರಿಯಾ ಮಣ್ಣಿನ ಆರೋಗ್ಯ ಹಾಳು ಮಾಡುವುದರ ಜೊತೆ ಮನುಷ್ಯರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದರು.
ತಹಶೀಲ್ದಾರ್ ಅಶ್ವಥ್, ಸಹಾಯಕ ಕೃಷಿ ನಿರ್ದೇಶಕ ಎಂ.ಡಿ. ಶ್ರೀಧರ ಮೂರ್ತಿ, ಉಪ ಕೃಷಿ ನಿರ್ದೇಶಕ ಅಶೋಕ್, ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ, ಸದಸ್ಯ ಹೊನ್ನೂರು ಮುನಿಯಪ್ಪ, ಪಿಎಸಿಎಸ್ ಅಧ್ಯಕ್ಷ ನುಲಿಯ ಚಂದಯ್ಯ, ಉಪಾಧ್ಯಕ್ಷೆ ಬಿ.ವಿ.ಶೀಲ, ಭೂಮೇಶ್ವಪ್ಪ, ಇಫ್ಕೋ ಸಂಸ್ಥೆಯ ವಿನಯ್, ಅಣಜಿ ಚಂದ್ರಶೇಖರಪ್ಪ, ರೇವಣಸಿದ್ದಪ್ಪ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.