ADVERTISEMENT

ಮಾದಾಪುರ | ನ್ಯಾನೊ ಯೂರಿಯಾ ಬಳಕೆ: ಸಮೃದ್ಧ ಬೆಳೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:48 IST
Last Updated 21 ಆಗಸ್ಟ್ 2025, 6:48 IST
ಚನ್ನಗಿರಿ ತಾಲ್ಲೂಕು ಮಾದಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ನ್ಯಾನೊ ಯೂರಿಯಾ ಸಿಂಪರಿಸಿದ ಹತ್ತು ದಿನಗಳ ನಂತರ ಮೆಕ್ಕೆಜೋಳ ಸಮೃದ್ಧವಾಗಿ ಬೆಳೆದಿರುವುದನ್ನು ಕೃಷಿ ಇಲಾಖೆ ಅಧಿಕಾರಿ ಪರಿಶೀಲಿಸಿದರು
ಚನ್ನಗಿರಿ ತಾಲ್ಲೂಕು ಮಾದಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ನ್ಯಾನೊ ಯೂರಿಯಾ ಸಿಂಪರಿಸಿದ ಹತ್ತು ದಿನಗಳ ನಂತರ ಮೆಕ್ಕೆಜೋಳ ಸಮೃದ್ಧವಾಗಿ ಬೆಳೆದಿರುವುದನ್ನು ಕೃಷಿ ಇಲಾಖೆ ಅಧಿಕಾರಿ ಪರಿಶೀಲಿಸಿದರು   

ಮಾದಾಪುರ (ಚನ್ನಗಿರಿ): ಹರಳು ರೂಪದ ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ಬಳಸಿದ ನ್ಯಾನೊ ಯೂರಿಯಾದಿಂದ ಮೆಕ್ಕೆಜೋಳ ಸಮೃದ್ಧವಾಗಿ ಬೆಳೆದಿದೆ ಎಂದು ಕೃಷಿ ಅಧಿಕಾರಿ ಮೆಹತಾಬ್ ಆಲಿ ತಿಳಿಸಿದರು.

ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಡ್ರೋನ್ ಮೂಲಕ ನ್ಯಾನೊ ಯೂರಿಯಾ ಸಿಂಪಡಿದ ಬೆಳೆಯನ್ನು ಪರಿಶೀಲಿಸಿ ಅವರು ಮಾತನಾಡಿದರು. 

ಮಾದಾಪುರ ಗ್ರಾಮದ ರೈತರಾದ ಚಂದ್ರಶೇಖರ್ ಹಾಗೂ ಜಯದೇವ ಅವರ 20 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಗೆ ಡ್ರೋನ್ ಮೂಲಕ ನ್ಯಾನೊ ಯೂರಿಯಾ ಸಿಂಪಡಣೆ ಮಾಡಲಾಗಿತ್ತು. ಹತ್ತು ದಿನಗಳ ನಂತರ ಪರಿಶೀಲಿಸಿದಾಗ ಮೆಕ್ಕೆಜೋಳ ಸಮೃದ್ಧವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.

ADVERTISEMENT

ಎಕರೆಗೆ 500 ಎಂಎಲ್ ನ್ಯಾನೊ ಯೂರಿಯಾ ಬೇಕಾಗುತ್ತದೆ. ಡ್ರೋನ್ ಮೂಲಕ 10 ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಲಾಗಿದೆ. ಇದರಿಂದ ರೈತರಿಗೆ ಖರ್ಚು ಕಡಿಮೆಯಾಗಿ, ಮಣ್ಣಿನ ಫಲವತ್ತತೆ ಹೆಚ್ಚಾಗಿದೆ. ಇದನ್ನು ಬೇರೆ ಔಷಧಿಗಳ ಜತೆಯೂ ಬೆರೆಸಿ ಸಿಂಪಡಿಸಬಹುದು. ಒಂದು ಬೆಳೆಯ ಅವಧಿಯಲ್ಲಿ ಎರಡು ಬಾರಿ ಸಿಂಪಡಿಸಬೇಕು. ಇಪ್ಕೋ ಸಂಸ್ಥೆ ಡ್ರೋನ್ ಮೂಲಕ ಯೂರಿಯಾ ಸಿಂಪರಿಸಲು ಒಂದು ಎಕರೆಗೆ ₹400 ಬಾಡಿಗೆ ನಿಗದಿಪಡಿಸಿದೆ. ರೈತರು ಆಯಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ,  ಸಂಪರ್ಕಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.