
ಮೊಳಕಾಲ್ಮುರು: ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಸ್ಥಳೀಯ ಆದರ್ಶ ಕೇಂದ್ರೀಯ ವಿದ್ಯಾಲಯದಲ್ಲಿ ಸೋಮವಾರ ಗಣಿತ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
‘ಗಣಿತ ಕಠಿಣ ವಿಷಯ ಎಂಬ ತಪ್ಪು ಕಲ್ಪನೆ ಅನೇಕ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ. ಶಿಕ್ಷಕರು ನೀಡುವ ಮಾರ್ಗದರ್ಶನದಂತೆ ಶ್ರಮ ಹಾಕಿ ಅಭ್ಯಾಸ ಮಾಡಿದಲ್ಲಿ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಎಲ್ಲಾ ರಂಗದಲ್ಲೂ ಗಣಿತ ಅರಿವು ಅಗತ್ಯವಿರುವ ಕಾರಣ ನಿರ್ಲಕ್ಷ್ಯ ಮಾಡದೇ ಅಭ್ಯಾಸ ಮಾಡಲು ಮುಂದಾಗಬೇಕು’ ಎಂದು ಉಪ ಪ್ರಾಂಶುಪಾಲ ಎಂ. ಮಲ್ಲಿಕಾರ್ಜುನ್ ಸಲಹೆ ಮಾಡಿದರು.
ವಸ್ತು ಪ್ರದರ್ಶನದಲ್ಲಿ ಕೋನಗಳ ವಿಧಗಳು, ಚತುರ್ಭುಜದ ಒಳಕೋನಗಳ ಮೊತ್ತ, ಮಗ್ಗಿಗಳಿಗೆ ಜ್ಯಾಮಿತಿಯ ಆಕೃತಿಗಳು, ನಿರ್ದೇಶಾಂಕ ಜ್ಯಾಮಿತಿ, ಮೇಲ್ಮೈ ವಿಸ್ತೀರ್ಣ ಮತ್ತು ಘನಫಲ, ವೃತ್ತಗಳ ಮೇಲಿನ ಪ್ರಮೇಯಗಳು, ವೃತ್ತದ ವಿಸ್ತೀರ್ಣ ಮಾದರಿಗಳು, ಗುಣಾಕಾರದ ಮಾದರಿಗಳು, ವೃತ್ತದ ಭಾಗಗಳು ಕುರಿತ ಪ್ರಾತ್ಯಕ್ಷತೆಗಳು ಗಮನ ಸೆಳೆದವು.
ಶಿಕ್ಷಕರಾದ ಎಂ. ರೂಪಾ, ನಂದೀಶ್, ಡಿ. ವಿಜಯಲಕ್ಷ್ಮೀ, ದೊಡ್ಡೇಶ್, ಕುಮಾರಸ್ವಾಮಿ, ಬಿ.ಎಂ. ಮುಜಾಮಿಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.