ADVERTISEMENT

ನ್ಯಾಮತಿ | ನವರಾತ್ರಿ: 118 ಮುತ್ತೈದೆಯರಿಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 17:25 IST
Last Updated 20 ಅಕ್ಟೋಬರ್ 2023, 17:25 IST
ನ್ಯಾಮತಿಯ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ದೇವಿ ಪೂಜೆ ನೆರವೇರಿಸಿ ಕೋಹಳ್ಳಿಮಠದ ವಿಶ್ವರಾದ್ಯರ ನೇತೃತ್ವದಲ್ಲಿ 118 ಮಂದಿ ಮುತ್ತೈದೆಯರಿಗೆ ಬಾಗಿನ ಉಡಿ ತುಂಬಲಾಯಿತು
ನ್ಯಾಮತಿಯ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ದೇವಿ ಪೂಜೆ ನೆರವೇರಿಸಿ ಕೋಹಳ್ಳಿಮಠದ ವಿಶ್ವರಾದ್ಯರ ನೇತೃತ್ವದಲ್ಲಿ 118 ಮಂದಿ ಮುತ್ತೈದೆಯರಿಗೆ ಬಾಗಿನ ಉಡಿ ತುಂಬಲಾಯಿತು   

ನ್ಯಾಮತಿ: ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿಯ 6ನೇ ದಿನವಾದ ಶುಕ್ರವಾರ ದೇವಿ ಪೂಜೆಯನ್ನು ನೆರವೇರಿಸಿ 118 ಮಂದಿ ಮುತ್ತೈದೆಯರಿಗೆ ಬಾಗಿನ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು.

ಲಲಿತಾ ಸಹಸ್ರ ನಾಮಾವಳಿ ಸಮಿತಿ ಸದಸ್ಯೆಯರು ದೇವಿ ಅಷ್ಟೋತ್ತರ, ಮಹಾ ಮಂಗಳಾರತಿ, ಕುಂಕುಮಾರ್ಚನೆ, ಸಹಸ್ರ ನಾಮವಾಳಿ ಜಪಿಸಿದರು.

ಆಂಜನೇಯಸ್ವಾಮಿ ಅರ್ಚಕ ಜಯಲಿಂಗಸ್ವಾಮಿ, ಶಿವಮೊಗ್ಗ ವಿಶ್ವನಾಥಯ್ಯ, ದೇವಸ್ಥಾನದ ಅರ್ಚಕ ಪೂಜಾರಿ ಪುಟ್ಟಪ್ಪ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ದೇವಸ್ಥಾನ ಸಮಿತಿಯವರು ಪ್ರಸಾದದ ವ್ಯವಸ್ಥೆ ಮಾಡಿದ್ದರು.

ADVERTISEMENT
ನವರಾತ್ರಿಯ 6 ದಿನ ಶುಕ್ರವಾರ ಸುಂದರವಾಗಿ ಆಲಂಕಾರಗೊಂಡು ರಾರಾಜಿಸುತ್ತಿರುವ ನ್ಯಾಮತಿ ಪಟ್ಟಣದ ಬನಶಂಕರಿ ಅಮ್ಮನವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.