ADVERTISEMENT

ನ್ಯಾಮತಿ ಪಟ್ಟಣ ಪಂಚಾಯಿತಿ: 11 ವಾರ್ಡ್‌ ರಚನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 3:30 IST
Last Updated 24 ಅಕ್ಟೋಬರ್ 2021, 3:30 IST

ನ್ಯಾಮತಿ: ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ಕ್ಷೇತ್ರ ಪುನರ್ ವಿಂಗಡಣೆ ಅನುಸಾರ ಪಟ್ಟಣ ಪಂಚಾಯಿತಿಯ 11 ವಾರ್ಡ್‌ಗಳ ಕ್ಷೇತ್ರ ವಿವರ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.

ಸಾರ್ವಜನಿಕರು ಆಕ್ಷೇಪಣೆ ಅಥವಾ ಸಲಹೆಗಳನ್ನು ನ.4ರ ಒಳಗಾಗಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1ನೇ ವಾರ್ಡ್ ಸಂಪಿಗೆ ನಗರ: (ಪೊಲೀಸ್ ಕ್ವಾರ್ಟರ್ಸ್‌, ಕೆ.ಇ.ಬಿ. ಕ್ವಾರ್ಟರ್ಸ್‌, ನೆಹರೂ ರಸ್ತೆ (ಸುರಹೊನ್ನೆ ಗಡಿಯಿಂದ ಅಕ್ಕಸಾಲಿ ಜಗದೀಶ ಮನೆಯನ್ನು ಒಳಗೊಂಡು ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜುವರೆಗೆ) ಸಂಪಿಗೆ ನಗರ, ಐ.ಬಿ. ಹಿಂಭಾಗ ಮತ್ತು ಗಡಿಚೌಡಮ್ಮ ದೇವಸ್ಥಾನದ ಏರಿಯಾ, ಚಂದ್ರಹಾಸ ಲೇಔಟ್, ಮೇದಾರ ಬೀದಿ ಮತ್ತು ಬಿಸಿಎಂ ಹಾಸ್ಟೆಲ್ ಎದುರು ಭಾಗ)

ADVERTISEMENT

2ನೇ ವಾರ್ಡ್ ಶಿವಾನಂದಪ್ಪ ಬಡಾವಣೆ- 1: (ಬಿಸಿಎಂ ಹಾಸ್ಟೆಲ್ ಏರಿಯಾ, ಶಿವಾನಂದಪ್ಪ ಬಡಾವಣೆಯ ಮುಖ್ಯರಸ್ತೆ ಪಶ್ಚಿಮದ ಮನೆಗಳು, ಬೆಂಕಿನಗರ, ಶಿವಾನಂದಪ್ಪ ಬಡಾವಣೆಯ 3ನೇ ಕ್ರಾಸ್‌ನ ದಕ್ಷಿಣ ಭಾಗದ ಮನೆಗಳು 4ನೇ ಕ್ರಾಸ್ ಮತ್ತು 5ನೇ ಕ್ರಾಸ್)

3ನೇ ವಾರ್ಡ್ ಶಿವಾನಂದಪ್ಪ ಬಡಾವಣೆ- 2: (ಶಿವಾನಂದಪ್ಪ ಬಡಾವಣೆಯ 3ನೇ ಕ್ರಾಸ್‌ನ ಉತ್ತರಭಾಗ, 2ನೇ ಕ್ರಾಸ್ ಮತ್ತು 1ನೇ ಕ್ರಾಸ್ ಮತ್ತು ಕಾಲೇಜು ಮುಂಭಾಗ, ಎ.ಪಿ.ಎಂ.ಸಿ ರಸ್ತೆ ಹಾಗೂ ಹಳೇ ಬಸ್ಟ್ಯಾಂಡ್ ಹಿಂಭಾಗ).

4ನೇ ವಾರ್ಡ್ ವಿನೋಬನಗರ: (ವಿನೋಬನಗರ 2ನೇ ಕ್ರಾಸ್, 3ನೇ ಕ್ರಾಸ್ ಮತ್ತು 4ನೇ ಕ್ರಾಸ್)

5ನೇ ವಾರ್ಡ್ ಸಂಗೊಳ್ಳಿರಾಯಣ್ಣ ಬಡಾವಣೆ: (ವಿನೋಬನಗರ 1ನೇ ಕ್ರಾಸ್, ನೆಹರೂ ರಸ್ತೆ ಉಮೇಶಪ್ಪನ ಮನೆಯಿಂದ ನುಚ್ಚಿನ ಮಿಲ್‌ವರೆಗೆ ಆಸ್ಪತ್ರೆ ಹಿಂಭಾಗ (ಸಂಗೊಳ್ಳಿರಾಯಣ್ಣ ಬಡಾವಣೆ 1ನೇ ಮತ್ತು 2ನೇ ಕ್ರಾಸ್).

6ನೇ ವಾರ್ಡ್ ಕುಂಬಾರಬೀದಿ- 1 ದಕ್ಷಿಣ ಭಾಗ: (ನೆಹರೂ ರಸ್ತೆ (ನುಚ್ಚಿನ ಮಿಲ್‌ನಿಂದ ಕಿತ್ತೂರುರಾಣಿ ಚನ್ನಮ್ಮ ವೃತ್ತ, ಮಹಾಂತೇಶ್ವರ ಕಲ್ಯಾಣ ಮಂಟಪಕ್ಕೆ ತಿರುಗುವ ರಸ್ತೆ, ಡಾ.ಗಂಗಪ್ಪನವರ ಮನೆಯವರೆಗೆ), ಕುಂಬಾರ ಬೀದಿ ದಕ್ಷಿಣ ಭಾಗದ ಮನೆಗಳು, ವಿವೇಕಾನಂದ ಶಾಲೆ ಎದುರು ಉತ್ತರ ಮತ್ತು ದಕ್ಷಿಣ ಭಾಗದ ಮನೆಗಳು, ಮಸೀದಿ ಏರಿಯಾ, ಸ್ವೀಪರ್ಸ್ ಕಾಲೊನಿ).

7ನೇ ವಾರ್ಡ್ ಕುಂಬಾರಬೀದಿ- 2 ಉತ್ತರ ಭಾಗ: (ಕುಂಬಾರಬೀದಿಯ ಉತ್ತರ ಭಾಗದ ಮನೆಗಳು, ದಾನಿಹಳ್ಳಿ ರಸ್ತೆ, ಮೇದಾರ ಬೀದಿ, ಮಹಾಂತೇಶ್ವರ ರಸ್ತೆ ಕೋವೇರ ಬೀದಿ)

8ನೇ ವಾರ್ಡ್ ನೇತಾಜಿ ರಸ್ತೆ: (ನೇತಾಜಿ ರಸ್ತೆ, ಶಿವಾಜಿ ರಸ್ತೆ, ಗಾಂಧಿರಸ್ತೆ ಕೋಡಿಕೊಪ್ಪ ಗ್ರಾಮದ ಗಡಿವರೆಗೆ)

9ನೇ ವಾರ್ಡ್ ಆಜಾದ್‌ ರಸ್ತೆ: (ಆಜಾದ್ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಕಾಳಿಕಾಂಬ ಬೀದಿ, ಮಾರಿಗುಡಿ ಬೀದಿ)

10ನೇ ವಾರ್ಡ್ ತಿಲಕ್ ರಸ್ತೆ: (ತಿಲಕ್‌ ರಸ್ತೆ, ಕುಂಬಾರ ಬೀದಿ ಕ್ರಾಸ್, ವಾಲ್ಮೀಕಿ ರಸ್ತೆ, ಪೂಜಾರ ಬೀದಿ)

11ನೇ ವಾರ್ಡ್ ಅಂಬೇಡ್ಕರ್ ನಗರ: (ಅಂಬೇಡ್ಕರ್ ನಗರ (ಎ.ಕೆ.ಕಾಲೊನಿ), ವೀರಭದ್ರೇಶ್ವರ ರಸ್ತೆ (ಅರಳಿಕಟ್ಟೆಯಿಂದ ಅಗಸೆಬಾಗಿಲುವರೆಗೆ), ಮರಡೇರ ಬೀದಿ, ಆಗಸೇಬಾಗಿನಿನಿಂದ ದೊಡ್ಡೇತ್ತಿನಹಳ್ಳಿ ಗಡಿ, ಆಗಸೇಬಾಗಿಲಿನಿಂದ ಕೊಡಚಗೊಂಡನಹಳ್ಳಿ ಗಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.