ADVERTISEMENT

ನ್ಯಾಮತಿ| ಮಹಿಳೆಯ ಕೊಂದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ 6ನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 4:14 IST
Last Updated 30 ಆಗಸ್ಟ್ 2022, 4:14 IST
ನ್ಯಾಮತಿ ತಾಲ್ಲೂಕಿನ ಜೀನಹಳ್ಳಿ ಗ್ರಾಮದ ರೈತರೊಬ್ಬರಿಗೆ ಸೇರಿದ ಮೇಕೆಯನ್ನು ಭಾನುವಾರ ಚಿರತೆ ಎಳೆದೊಯ್ದು ಕೊಂದು ಹಾಕಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕತ್ತಿಗೆ ಗ್ರಾಮದ ಸಮೀಪ ಬೋನು ಅಳವಡಿಸಿದರು.
ನ್ಯಾಮತಿ ತಾಲ್ಲೂಕಿನ ಜೀನಹಳ್ಳಿ ಗ್ರಾಮದ ರೈತರೊಬ್ಬರಿಗೆ ಸೇರಿದ ಮೇಕೆಯನ್ನು ಭಾನುವಾರ ಚಿರತೆ ಎಳೆದೊಯ್ದು ಕೊಂದು ಹಾಕಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಕತ್ತಿಗೆ ಗ್ರಾಮದ ಸಮೀಪ ಬೋನು ಅಳವಡಿಸಿದರು.   

ಜೀನಹಳ್ಳಿ (ನ್ಯಾಮತಿ): ತಾಲ್ಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ 6ನೇ ದಿನವಾದ ಸೋಮವಾರವೂ ಮುಂದುವರಿಯಿತು. ಆದರೂ ಚಿರತೆ ಪತ್ತೆಯಾಗಿಲ್ಲ.

ತಾಲ್ಲೂಕಿನ ಜೀನಹಳ್ಳಿ ಗ್ರಾಮದಲ್ಲಿ ಎ.ಕೆ. ನಾಗರಾಜಪ್ಪ ಎಂಬುವವರಿಗೆ ಸೇರಿದ ಮೇಕೆಯೊಂದನ್ನು ಭಾನುವಾರ ಚಿರತೆ ಕೊಂದು ಹಾಕಿದೆ. ಈ ಕಾರಣ ಚಿರತೆ ಸಂಚರಿಸಿದ ಕತ್ತಿಗೆ ಗ್ರಾಮದ ಹೊರವಲಯದಲ್ಲಿ ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಅಳವಡಿಸಲಾಗಿದೆ. ಚಿರತೆ ಸೆರೆ ಹಿಡಿಯುವವರೆಗೂ ಜನರು ಎಚ್ಚರಿಕೆಯಿಂದ ಸಂಚರಿಸಬೇಕು. ಸಂಚರಿಸುವಾಗ ಕತ್ತಿ, ಕೋಲನ್ನು ಜತೆಗೆ ಇಟ್ಟುಕೊಳ್ಳಬೇಕು ಎಂದು ಹೊನ್ನಾಳಿ ಆರ್‌ಎಫ್‌ಒ ಕೆ.ಆರ್. ಚೇತನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT