ADVERTISEMENT

‘ಒಂದು ಬೊಗಸೆ’ ಪುಸ್ತಕ ಬಿಡುಗಡೆ ಇಂದು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:32 IST
Last Updated 16 ಜನವರಿ 2026, 5:32 IST
Venugopala K.
   Venugopala K.

ರಾಮೇಶ್ವರ (ನ್ಯಾಮತಿ): ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಜ. 16ರಂದು ಮುಲ್ಕಿಗೌಡ್ರ ದೇವಿಕೊಪ್ಪದ ಈಶ್ವರಪ್ಪ ಅವರ 41ನೇ ಪುಣ್ಯಸ್ಮರಣೆ ಹಾಗೂ ಡಿ.ಇ.ಬಸವರಾಜಪ್ಪ ಅವರ ‘ಒಂದು ಬೊಗಸೆ’ ಆತ್ಮಕಥನ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ಅರಸೀಕೆರೆ ತಾಲ್ಲೂಕು ಹರಳಕಟ್ಟೆ ತರಳಬಾಳು ಶಾಖಾ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಶಾಸಕ ಡಿ.ಜಿ.ಶಾಂತನಗೌಡ ಪುಸ್ತಕ ಬಿಡುಗಡೆ ಮಾಡುವರು. ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಅಧ್ಯಕ್ಷತೆ, ಸಂಪಾದಕ ಎ.ಎಂ.ಎಂ. ಕೊಟ್ರಸ್ವಾಮಿ, ಎನ್‌ಐಸಿ ಉಪ ಮಹಾನಿರ್ದೇಶಕ ದಶರಥ ಮಾಶಾಲ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವೈದ್ಯ ಡಿ.ಬಿ.ಗಂಗಪ್ಪ ಒಳಗೊಂಡಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾದ ಡಿ.ಇ.ಬಸವರಾಜಪ್ಪ ಮತ್ತು ವೈದ್ಯ ಡಿ.ಜಯರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT