ADVERTISEMENT

6ರಂದು ಪಂಚಮಸಾಲಿ ಮೀಸಲಾತಿ ಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 2:44 IST
Last Updated 4 ಜನವರಿ 2021, 2:44 IST

ದಾವಣಗೆರೆ: ಪಂಚಮಸಾಲಿ ಮೀಸಲಾತಿ ಪಾದಯಾತ್ರೆ ಸ್ವಾಗತ ಸಮಿತಿ ಜಿಲ್ಲಾ ಘಟಕದಿಂದ ಜ. 6ರ ಬೆಳಿಗ್ಗೆ 10ಕ್ಕೆ ಕಾರಿಗನೂರು ಗ್ರಾಮದ ಕ್ರಾಸ್ ಬಳಿ ಪಂಚಮಸಾಲಿ ಮೀಸಲಾತಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಜಯಾನಂದ ಕಾಶಪ್ಪನರ್ ಸೇರಿ ಸಮಾಜದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಗೌರವಾಧ್ಯಕ್ಷ ಎಚ್.ಎಸ್. ನಾಗರಾಜ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಬೇಕು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಜ.14ರಂದು ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಿದ್ದಾರೆ’ ಎಂದರು.

ADVERTISEMENT

‘ಪಂಚಮಸಾಲಿ ಸಮಾಜ ಒಂದೇ. ಭಕ್ತರೇ ಎರಡು ಮಠಗಳನ್ನಾಗಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಯಾವುದೇಭಿನ್ನಾಭಿಪ್ರಾಯಗಳು ಇಲ್ಲ. ಹರಿಹರದ ಮಠ ಮತ್ತು ಕೂಡಲಸಂಗಮದ ಮಠ ಎರಡು ಕಣ್ಣುಗಳಿದ್ದಂತೆ. ವಚನಾನಂದ ಸ್ವಾಮೀಜಿ ಸಹ ಈ ಹೋರಾಟಕ್ಕೆ ಬೆಂಬಲಿಸಿದ್ದಾರೆ’ ಎಂದು ಹೇಳಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎಂ.ಟಿ. ಸುಭಾಶ್ಚಂದ್ರ, ಅಶೋಕ ಗೋಪನಾಳ್, ಸಂಘಟನಾ ಕಾರ್ಯದರ್ಶಿ ಪ್ರಭು ಕಲಬುರ್ಗಿ, ಮುಖಂಡರಾದ ಗಂಗಾಧರ ಕಾರಿಗನೂರು, ಶ್ರೀಧರ ಪಾಟೀಲ್ ಬಿ.ಎಸ್., ನಾಗರಾಜ್, ಮಹಾಂತೇಶ್ ಒಣರೊಟ್ಟಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.