ADVERTISEMENT

ಶಿವಶಂಕರಪ್ಪ ಅಂತಿಮ ದರ್ಶನದ ವೇಳೆ ವ್ಯಕ್ತಿಯ ಜೇಬಿಗೆ ಕತ್ತರಿ: ₹36 ಸಾವಿರ ಕಳವು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 7:05 IST
Last Updated 19 ಡಿಸೆಂಬರ್ 2025, 7:05 IST
<div class="paragraphs"><p>ಹಣ </p></div>

ಹಣ

   

ಹಣ

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ನಗರದ ವ್ಯಕ್ತಿಯೊಬ್ಬರ ಜೇಬಿನಿಂದ ದುಷ್ಕರ್ಮಿಗಳು ₹36,000 ನಗದು ಕಳವು ಮಾಡಿರುವ ಘಟನೆ ತಡವಾಗಿ ಗೊತ್ತಾಗಿದೆ.

ADVERTISEMENT

ನಗರದ ಬಿಐಟಿ ಲೇಔಟ್ ನಿವಾಸಿಯೊಬ್ಬರು ಅಂತಿಮ ದರ್ಶನ ಪಡೆಯಲು ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಿವಾಸದ ಬಳಿಗೆ ಬಂದಿದ್ದರು. ಈ ವೇಳೆ ಗೇಟ್‌ ಬಳಿ ಭಾರಿ ಸಂಖ್ಯೆಯ ಜನರು ಸೇರಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ವ್ಯಕ್ತಿಯ ಪ್ಯಾಂಟ್ ಜೇಬು ಕತ್ತರಿಸಿ ಅದರಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ.

ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.