ADVERTISEMENT

ಇಂಗ್ಲೆಂಡ್‍ನಲ್ಲಿ ದಾವಣಗೆರೆಯ ಶುಶ್ರೂಶಕ ಪ್ರವೀಣಕುಮಾರ್ ಸೇವೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 16:03 IST
Last Updated 11 ಮೇ 2020, 16:03 IST
ಪ್ರವೀಣಕುಮಾರ್
ಪ್ರವೀಣಕುಮಾರ್   

ದಾವಣಗೆರೆ: ಯುನೈಟೆಡ್ ಕಿಂಗಡಂನ ಬರ್ಕಶೈರ್ ರಾಜ್ಯದ ರಾಯಲ್ ಬರ್ಕಶೈರ್ ಜಿಲ್ಲಾ ಆಸ್ಪತ್ರೆಯಲ್ಲಿ ದಾವಣಗೆರೆಯ ಪ್ರವೀಣಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ.

ನಗರದ ಬಾಪೂಜಿ ಕಾಲೇಜ್ ಆಫ್ ನರ್ಸಿಂಗ್‍ನ ವಿದ್ಯಾರ್ಥಿಯಾಗಿದ್ದು 18 ವರ್ಷಗಳಿಂದಲೂ ಇಂಗ್ಲೆಂಡ್‍ನಲ್ಲಿದ್ದು, ಎನ್.ಎಚ್.ಎಸ್‌ನ ವಿವಿಧ ಆಸ್ಪತ್ರೆಗಳಲ್ಲಿ, ಬರ್ಮಿಂಗ್‍ಹ್ಯಾಮ್, ಲಂಡನ್ ನಗರದಲ್ಲಿ ನರ್ಸಿಂಗ್ ಎಜುಕೇಟರ್ ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ರಾಯಲ್ ಬರ್ಕಶೈರ್ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫೆಬ್ರುವರಿಯಿಂದ ಬರ್ಕಶೈರ್‍ನ ಆಸ್ಪತ್ರೆಗಳಲ್ಲಿ 2,200 ಸೋಕಿತರು ದಾಖಲಾಗಿದ್ದು, ಅಲ್ಲಿ 469 ಮೃತಪಟ್ಟಿದ್ದಾರೆ. ಏಳು ವಾರಗಳ ಲಾಕ್‌ಡೌನ್ ಅವಧಿ ಇದೀಗ ಮುಗಿದಿದ್ದು, ತಜ್ಞ ವೈದ್ಯರ ತಂಡದ ಜೊತೆ ಶುಶ್ರೂಶಕ ಪ್ರವೀಣಕುಮಾರ್.ಎಂ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುವ ಮೂಲಕ ಕೊರೊನಾ ಸೋಂಕಿತರಿಗೆ ಧೃತಿಗೆಡದೆ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ಪ್ರವೀಣಕುಮಾರ್ ನಗರದ ಹಿರಿಯ ಕಲಾವಿದ ಮತ್ತು ಮಾಜಿ ಜಿಲ್ಲಾ ಕಮಾಂಡೆಂಟ್ ಮಹಲಿಂಗಪ್ಪ ಮತ್ತು ನಾಗರತ್ನ ದಂಪತಿಯ ಹಿರಿಯ ಪುತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.