
ಹರಿಹರ: ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪರ ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿ ಮಹಾಸಭಾದ ಹರಿಹರ ತಾಲ್ಲೂಕು ಘಟಕದಿಂದ ಸೋಮವಾರ ನಗರದ ಹರಿಹರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಉದ್ಯಮಿಯಾಗಿ, ಮುಖಂಡರಾಗಿ, ಜನಪ್ರತಿನಿಧಿಯಾಗಿ ಶಿವಶಂಕರಪ್ಪನವರು ಮಾಡುತ್ತಿರುವ ಜನಸೇವೆ ಅನನ್ಯವಾದುದು. ದಾವಣಗೆರೆಯನ್ನು ಶಿಕ್ಷಣ ಕಾಶಿಯಾಗಿ, ಆರೋಗ್ಯ ಸೇವೆಯ ಕ್ಷೇತ್ರವಾಗಿ ಬೆಳೆಸುವಲ್ಲಿ ಇವರ ಪಾತ್ರ ಮಹತ್ವವಾದುದು. ದೇವರು ಅವರಿಗೆ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಲಾಯಿತು ಎಂದು ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ ತಿಳಿಸಿದರು.
ಹಿರಿಯರಾದ ಗೌಡರ ಮಹದೇವಪ್ಪ, ಪದಾಧಿಕಾರಿಗಳಾದ ಜಿ.ಕೆ.ಮಲ್ಲಿಕಾರ್ಜುನ್, ವೀರಣ್ಣ ಯಾದವಾಡ, ನಾಗರಾಜ್ ಕುರುವತ್ತಿ, ಅಂಜು ಸುರೇಶ್, ವೀರಯ್ಯ, ಎಚ್.ಎಂ.ರುದ್ರೇಶ್, ಪ್ರವೀಣ್ ಗಜಾಪುರ, ಎಚ್.ಮಾದೇವಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.