ಹರಿಹರ: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಬೆಳ್ಳೂಡಿ ಹಾಗೂ ಕುಂಬಳೂರು ಗ್ರಾಮದಲ್ಲಿ ತಲಾ ಒಂದು ಮನೆ ಭಾಗಶಃ ಕುಸಿದಿದೆ.
ಬೆಳ್ಳೂಡಿ ಗ್ರಾಮದ ಶಿವಪ್ಪ ಬಡಾವಣೆಯ ಕೆರ್ನಳ್ಳಿ ಸಿದ್ದಮ್ಮ ಅವರ ಮನೆ ಚಾವಣಿ ಕುಸಿದು ಸುಮಾರು ₹ 2 ಲಕ್ಷ ಹಾನಿಯಾಗಿದ್ದರೆ, ಕುಂಬಳೂರಿನ ಹರೀಶ್ ಹಾಗೂ ಹನುಮೇಶ್ ಅವರ ಮನೆ ಗೋಡೆ ಕುಸಿದು ₹ 40 ಸಾವಿರ ಹಾನಿಯಾಗಿದೆ.
ಮಳೆ ವಿವರ: ಶನಿವಾರದಲ್ಲಿ ಹರಿಹರ 3.0 ಮಿ.ಮೀ, ಕೊಂಡಜ್ಜಿ 2.6, ಮಲೆಬೆನ್ನೂರು 3.4, ಹೊಳೆಸಿರಿಗೆರೆ 13.3, ಒಟ್ಟು 13.2, ಸರಾಸರಿ 3.3 ಮಿ.ಮೀ. ಮಳೆಯಾಗಿದೆ ಎಂದು ತಾಲ್ಲೂಕು ಕಚೇರಿ ಮೂಲ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.