ಜಗಳೂರು: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಹಲವು ದಿನಗಳ ನಂತರ ಬಿರುಸಿನ ಮಳೆಯಾಗಿದ್ದು, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಹಳ್ಳಗಳು, ಚೆಕ್ ಡ್ಯಾಂ, ಗೋಕಟ್ಟೆಗಳು ತುಂಬಿ ಹರಿಯುತ್ತಿವೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳ, ಸರಿಯಾದ ಮಳೆಯಗದೇ ಸೊರಗುವ ಸ್ಥಿತಿಗೆ ತಲುಪಿ ರೈತರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ನಾಲ್ಕೈದು ದಿನಗಳಿಂದ ಬಿಸಿಲಿನ ವಾತಾವರಣ ಹೆಚ್ಚಿದ್ದರಿಂದ, ಹತ್ತಿ, ರಾಗಿ, ಮೆಕ್ಕೆಜೊಳ ಬೆಳೆಗಳಿಗೆ ಮಳೆಯ ಅಗತ್ಯ ಇತ್ತು.
ತಾಲ್ಲೂಕಿನ ಕಸಬಾ, ಸೊಕ್ಕೆ ಹಾಗೂ ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಒಂದು ತಾಸಿಗೂ ಹೆಚ್ಚು ಅವಧಿಯ ಬಿರುಸಿನ ಮಳೆಯಾಗಿದೆ. ಬಿಳಿಚೋಡು ಹೋಬಳಿಯಲ್ಲಿ ಇದುವೆರೆಗೆ ಉತ್ತಮ ಮಳೆಯಾಗಿತ್ತು. ಆದರೆ ಸೊಕ್ಕೆ ಮತ್ತು ಕಸಬಾ ಹೋಬಳಿ ಹಾಗೂ ತೊರೆಸಾಲು ಭಾಗದಲ್ಲಿ ಮಳೆಯ ಕೊರತೆಯಾಗಿತ್ತು. ಸೋಮವಾರ ರಾತ್ರಿ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.