ADVERTISEMENT

‘ಸ್ತ್ರೀ ಸಮಾನತೆಗೆ ರಾಜಾರಾಮ್ ಮೋಹನ್ ರಾಯ್ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2022, 4:28 IST
Last Updated 16 ನವೆಂಬರ್ 2022, 4:28 IST
ದಾವಣಗೆರೆಯ ನಗರ ಕೇಂದ್ರ ಗ್ರಂಥಾಲಯದ ಮುಂಭಾಗದಲ್ಲಿ ರಾಜಾರಾಮ್ ಮೋಹನ್‌ರಾಯ್‌ ಅವರ 250ನೇ ಜನ್ಮದಿನ ಹಾಗೂ ಮಹಿಳಾ ಸಬಲೀಕರಣ ಜಾಗೃತಿ ಅಂಗವಾಗಿ ಆಯೋಜಿಸಿದ್ದ ಜಾಥಾಕ್ಕೆ ಮೇಯರ್ ಜಯಮ್ಮ ಗೋಪಿನಾಯ್ಕ್‌ ಚಾಲನೆ ನೀಡಿದರು. –ಪ್ರಜಾವಾಣಿ ಚಿತ್ರ
ದಾವಣಗೆರೆಯ ನಗರ ಕೇಂದ್ರ ಗ್ರಂಥಾಲಯದ ಮುಂಭಾಗದಲ್ಲಿ ರಾಜಾರಾಮ್ ಮೋಹನ್‌ರಾಯ್‌ ಅವರ 250ನೇ ಜನ್ಮದಿನ ಹಾಗೂ ಮಹಿಳಾ ಸಬಲೀಕರಣ ಜಾಗೃತಿ ಅಂಗವಾಗಿ ಆಯೋಜಿಸಿದ್ದ ಜಾಥಾಕ್ಕೆ ಮೇಯರ್ ಜಯಮ್ಮ ಗೋಪಿನಾಯ್ಕ್‌ ಚಾಲನೆ ನೀಡಿದರು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್‍ ಅವರು ಸ್ತ್ರೀ ಸಮಾನತೆಗೆ ಹೋರಾಡಿದ ಅಗ್ರಗಣ್ಯ ವ್ಯಕ್ತಿ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಫಾಲಾಕ್ಷಿ ಹೇಳಿದರು.

ರಾಜಾರಾಮ್ ಮೋಹನ್ ರಾಯ್ ಅವರ 250ನೇ ಜನ್ಮ ದಿನದ ಪ್ರಯುಕ್ತ ಕೇಂದ್ರ ಗ್ರಂಥಾಲಯವುನಗರ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರ ಆಯೋಜಿಸಿದ ಮಹಿಳಾ ಜಾಗೃತಿ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿಯಂಥ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು.

ADVERTISEMENT

ಜಾಥಾ ಉದ್ಘಾಟನೆ: ಕಾರ್ಯಕ್ರಮಕ್ಕೂ ಮುನ್ನ ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಮಹಿಳಾ ಜಾಗೃತಿ ಕುರಿತ ಜಾಥಾಕ್ಕೆ ಮೇಯರ್‌ ಆರ್. ಜಯಮ್ಮ ಗೋಪಿನಾಯ್ಕ್‌ ಚಾಲನೆ
ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಜಿಲ್ಲಾ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ, ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಶಾಂತ ಭಟ್‌ ಮುಂತಾದವರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.