ADVERTISEMENT

ಕಡಿಮೆಯಾದ ಜನರ ಓಡಾಟ

​ಪ್ರಜಾವಾಣಿ ವಾರ್ತೆ
Published 12 ಮೇ 2021, 5:27 IST
Last Updated 12 ಮೇ 2021, 5:27 IST
ಲಾಕ್‌ಡೌನ್‌ ಕಾಲದಲ್ಲಿ ಅನಗತ್ಯವಾಗಿ ಸಂಚರಿಸಿದ್ದಕ್ಕಾಗಿ ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳನ್ನು ಡಿಎಆರ್‌ ಮೈದಾನದಲ್ಲಿ ನಿಲ್ಲಿಸಿರುವುದು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಲಾಕ್‌ಡೌನ್‌ ಕಾಲದಲ್ಲಿ ಅನಗತ್ಯವಾಗಿ ಸಂಚರಿಸಿದ್ದಕ್ಕಾಗಿ ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳನ್ನು ಡಿಎಆರ್‌ ಮೈದಾನದಲ್ಲಿ ನಿಲ್ಲಿಸಿರುವುದು–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಲಾಕ್‌ಡೌನ್‌ ಕಟ್ಟುನಿಟ್ಟಿನ ಜಾರಿಯ ಪರಿಣಾಮ ಎರಡನೇ ದಿನ ಕಂಡಿದೆ. ಬೆಳಿಗ್ಗೆ 10 ಗಂಟೆಯ ನಂತರ ಜನ ರಸ್ತೆಗೆ ಇಳಿದಿಲ್ಲ. ಮೊದಲ ದಿನ ಹಲವು ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದರಿಂದ ವಾಹನಗಳನ್ನು ಜನರು ಮಂಗಳವಾರ ಹೊರಗೆ ತರದೇ ಸ್ವಯಂ ನಿಯಂತ್ರಣ ಹಾಕಿಕೊಂಡಿದ್ದರು. ಹಾಗಾಗಿ 10 ಗಂಟೆಯ ಬಳಿಕ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಕೆಎಸ್‍ಆರ್‌ಟಿಸಿ ಬಸ್‍ನಿಲ್ದಾಣ, ಖಾಸಗಿ ಬಸ್‍ನಿಲ್ದಾಣ, ಮಾರುಕಟ್ಟೆ ಪ್ರದೇಶಗಳು, ಆಟೋನಿಲ್ದಾಣಗಳು ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ದಾವಣಗೆರೆ ನಗರವನ್ನು ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿತ್ತು. ಸಾರ್ವಜನಿಕರು ಹೊರಗೆ ಬಾರದೇ ಲಾಕ್‍ಡೌನ್‍ಗೆ ಸಹಕರಿಸಿದರು.

ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನರ ಓಡಾಟ ಇರುತ್ತಿದ್ದ ಕೆ.ಆರ್.ಮಾರುಕಟ್ಟೆ, ಎಪಿಎಂಸಿ, ಹಳೇ ದಾವಣಗೆರೆಯ ಕೆಲವು ರಸ್ತೆಗಳು ಖಾಲಿಯಾಗಿದ್ದವು. ವಾಹನ ಮತ್ತು ಜನರ ಸಂಚಾರ ವಿರಳವಾಗಿತ್ತು. ಕೆಲವು ಕಡೆಗಳಲ್ಲಿ ಮಾತ್ರ ಪೊಲೀಸರಿಗೆ ಜಪ್ತಿ ಮಾಡಲು ವಾಹನಗಳು ಸಿಕ್ಕಿದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.