ADVERTISEMENT

ರಸ್ತೆ ಅಪಘಾತ: ಮೊಮ್ಮೊಗಳ ಜೊತೆ ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2022, 14:31 IST
Last Updated 4 ಮೇ 2022, 14:31 IST
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಂದುವಾಡ ಕ್ರಾಸ್ ಬಳಿ ಬುಧವಾರ ನಡೆದ ಅಪಘಾತ
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಂದುವಾಡ ಕ್ರಾಸ್ ಬಳಿ ಬುಧವಾರ ನಡೆದ ಅಪಘಾತ   

ದಾವಣಗೆರೆ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕುಂದುವಾಡ ಕ್ರಾಸ್ ಬಳಿ ಬುಧವಾರ ನಡೆದ ಅಪಘಾತದಲ್ಲಿ ಮೊಮ್ಮೊಗಳ ಜೊತೆಗೆ ದಂಪತಿ ಮೃತಪಟ್ಟಿದ್ದಾರೆ.

ಶಿವಮೊಗ್ಗದ ಟಿಪ್ಪುನಗರದ ಮೊಹಮ್ಮದ್ ಜಬೀವುಲ್ಲಾ (45), ಅವರ ಪತ್ನಿ ಹಮೀದಾ (43) ಹಾಗೂ ಅವರ ಪುತ್ರಿಯ ಮಗಳಾದ ಗೌಸಿಯಾಬಾನು (4) ಮೃತರು.

ಮೂವರೂ ಒಂದೇ ಬೈಕಿನಲ್ಲಿ ಶಿವಮೊಗ್ಗದಿಂದ ದಾವಣಗೆರೆಗೆ ಬರುತ್ತಿದ್ದರು. ದಾವಣಗೆರೆಯ ಚಿಕ್ಕನಹಳ್ಳಿಯ ಹೊಸಬಡಾವಣೆಯಲ್ಲಿರುವ ಮಗಳ ಮನೆಗೆ ಮೊಮ್ಮಗಳನ್ನು ಬಿಡಲು ಬರುತ್ತಿದ್ದರು.

ADVERTISEMENT

ಈ ವೇಳೆ ಬೈಕ್ ಆಯ ತಪ್ಪಿ ಬಿದ್ದು ಲಾರಿಯ ಚಕ್ರಕ್ಕೆ ಸಿಲುಕಿದೆ. ಹಮೀದಾ ಹಾಗೂ ಗೌಸಿಯಾಬಾನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೊಹಮ್ಮದ್‌ ಜಬೀವುಲ್ಲಾ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ದಾವಣಗೆರೆ ದಕ್ಷಿಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.