ADVERTISEMENT

ದಾವಣಗೆರೆ: ವೃದ್ಧನ ಪ್ರಾಣ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 13:19 IST
Last Updated 9 ಜುಲೈ 2023, 13:19 IST
Venugopala K.
   Venugopala K.

ದಾವಣಗೆರೆ: ಹಳಿ ದಾಟಲು ಮುಂದಾದಾಗ ಏಕಾಏಕಿ ರೈಲು ಬರುವುದನ್ನು ಕಂಡು ಒತ್ತಡಕ್ಕೊಳಗಾಗಿ ರೈಲು ಹಳಿಯಲ್ಲೇ ಸಿಲುಕಿದ್ದ ವೃದ್ಧರೊಬ್ಬರನ್ನು ರೈಲ್ವೆ ರಕ್ಷಣಾ ಪಡೆ (ಆರ್ ಪಿಎಫ್) ಪೊಲೀಸರು ರಕ್ಷಿಸಿದ್ದಾರೆ.

ಇಲ್ಲಿನ ಶಕ್ತಿನಗರದ ನಿವಾಸಿ 80 ವರ್ಷದ ರಂಗಪ್ಪ ಅವರು ಮಗನನ್ನು ನೋಡಲು‌ ಅರಸಿಕೆರೆಗೆ ಪ್ರಯಾಣಿಸಲು ಶುಕ್ರವಾರ ಬೆಳಿಗ್ಗೆ ರೈಲು ನಿಲ್ದಾಣಕ್ಕೆ ಬಂದಿದ್ದರು.

ಈ ವೇಳೆ ಮತ್ತೊಂದು ಪ್ಲಾಟ್‌ ಫಾರ್ಮ್ ಗೆ ತೆರಳಲು ರೈಲು ಬರುತ್ತಿರುವುದನ್ನು ಗಮನಿಸದೇ ಹಳಿ‌ ಮೇಲೆ ಇಳಿದಿದ್ದಾರೆ. ಹಳಿಯಲ್ಲಿ ನಿಂತಾಗಲೇ ಕುಚುವೇಲಿ - ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಬರುತ್ತಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ಮುಂದೆಯೂ ಹೋಗದೇ ಮೇಲೆಯೂ ಹತ್ತದೇ ಒತ್ತಡಕ್ಕೊಳಗಾಗಿ ಅಲ್ಲಿಯೇ ನಿಂತಿದ್ದಾರೆ.

ADVERTISEMENT

ಕೂಡಲೇ ಧಾವಿಸಿದ ಆರ್ ಪಿಎಫ್ ಸಿಬ್ಬಂದಿ ಶಿವಾನಂದ ಅವರು ರಂಗಪ್ಪ ಅವರನ್ನು ರಕ್ಷಿಸಿದ್ದಾರೆ.

ರಂಗಪ್ಪ ಅವರು ಹಳಿಯಲ್ಲಿರುವುದನ್ನು ಕಂಡು ರೈಲು ಕೂಡಾ ನಿಧಾನವಾಗಿ ಬಂದು ನಿಂತಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದರು.

ಈ ದೃಶ್ಯಾವಳಿ ರೈಲು ನಿಲ್ದಾಣದಲ್ಲಿನ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.