ADVERTISEMENT

ಎಳ್ಳು, ಬೆಲ್ಲ ಖರೀದಿ ಜೋರು

ಮಕರ ಸಂಕ್ರಾಂತಿ ಹಬ್ಬ ಆಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:13 IST
Last Updated 15 ಜನವರಿ 2023, 5:13 IST
ದಾವಣಗೆರೆಯ ಗಡಿಯಾರ ಕಂಬದ ಬಳಿ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಮಹಿಳೆಯರು ಎಳ್ಳು, ಬೆಲ್ಲದ ಅಚ್ಚು ಖರೀದಿಸಿದರು.
ದಾವಣಗೆರೆಯ ಗಡಿಯಾರ ಕಂಬದ ಬಳಿ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಮಹಿಳೆಯರು ಎಳ್ಳು, ಬೆಲ್ಲದ ಅಚ್ಚು ಖರೀದಿಸಿದರು.   

ದಾವಣಗೆರೆ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶನಿವಾರ ಜನರು ಕಬ್ಬು, ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ರೊಟ್ಟಿ ಖರೀದಿಸಿದರು.

ನಗರದ ಶಾಮನೂರು ರಸ್ತೆ, ರಾಮ್ ಅಂಡ್
ಕೊ ವೃತ್ತ, ಚಾಮರಾಜಪೇಟೆ, ಮಂಡಿಪೇಟೆ,
ಹದಡಿ ರಸ್ತೆ, ಚರ್ಚ್‌ರೋಡ್‌, ಬಿಐಇಟಿ ಕಾಲೇಜ್‌ ರಸ್ತೆ, ಸಿಜಿ ಆಸ್ಪತ್ರೆ, ಹಳೆ ದಾವಣಗೆರೆಯ
ಗಡಿಯಾರದ ಕಂಬ, ಪ್ರವಾಸಿ ಮಂದಿರ ರಸ್ತೆ ಸಹಿತ ವಿವಿಧೆಡೆ ಕಬ್ಬು ಖರೀದಿಸುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ದರ ತುಸು ಹೆಚ್ಚಾದರೂ ಗ್ರಾಹಕರು ಕಬ್ಬನ್ನು ಖರೀದಿಸಿದರು.

ಕುಸುರಿಕಾಳು, ಎಳ್ಳು, ಬೆಲ್ಲ, ಕೊಬ್ಬರಿ, ಪೆಪ್ಪರ್‌ಮೆಂಟ್‌, ಸಕ್ಕರೆ ಅಚ್ಚು ಅಲ್ಲದೇ ಇವುಗಳ ಮಿಶ್ರಣದ ಪ್ಯಾಕೆಟ್‌ಗಳು ಅಲ್ಲದೇ ಕಡಲೇಕಾಳು ಗಿಡವನ್ನು ಖರೀದಿಸಿದರು. ಹಬ್ಬಕ್ಕೆ ಅಗತ್ಯ
ಸೇವಂತಿಗೆ ಹೂವು, ಬಾಳೆಹಣ್ಣನ್ನು ಜನ ಖರೀದಿ
ಸುತ್ತಿರುವುದು ಕಂಡು ಬಂತು. ಒಂದು ಜೊಲ್ಲೆ ಕಬ್ಬಿಗೆ
₹60 ರಿಂದ ₹70 ಇತ್ತು. ರಾಮ್‌ ಅಂಡ್ ಕೊ ವೃತ್ತದಲ್ಲಿನ ಸಾಯಿ ಸ್ಟೋರ್‌ನಲ್ಲಿ ಕಾಲು ಕೆಜಿ ಸಕ್ಕರೆ ಅಚ್ಚಿಗೆ ₹ 50 ಬೆಲೆ ಇತ್ತು.

ADVERTISEMENT

ಸಂಕ್ರಾಂತಿ ಹಬ್ಬದ ದಿನವಾದ ಭಾನುವಾರ ಮನೆಯಲ್ಲಿ ಹೋಳಿಗೆ ಸಿಹಿ ಊಟ ಮಾಡುವುದು ವಾಡಿಕೆ. ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಭಕ್ತರು ನದಿ, ಕೆರೆಗಳಿಗೆ ತೆರಳಿ ಪುಣ್ಯಸ್ನಾನ ಮಾಡಲಿದ್ದಾರೆ.
ಹಬ್ಬದ ಊಟವನ್ನು ಸಿದ್ಧಪಡಿಸಿಕೊಂಡು ಬುತ್ತಿ ಕಟ್ಟಿಕೊಂಡು ಸಂಬಂಧಿಕರೆಲ್ಲ ಉದ್ಯಾನ, ಕೆರೆ, ಆನಗೋಡು ಪ್ರಾಣಿ ಸಂಗ್ರಹಾಲಯ ಹಾಗೂ ಗಾಜಿನ ಮನೆಗಳಿಗೆ ತೆರಳಿ ಒಟ್ಟಿಗೆ ಕುಳಿತು ಭೋಜನ ಮಾಡಲಿದ್ದಾರೆ.

ಅಲ್ಲದೇ ಮನೆಯಲ್ಲಿ ಪೂಜೆ ಸಲ್ಲಿಸಿ, ದೇಗುಲಗಳಿಗೆ ಜನರು ಭೇಟಿ ನೀಡಿ ಭಕ್ತಿ ಸಮರ್ಪಿಸಲಿದ್ದಾರೆ. ಸಂಬಂಧಿಕರಿಗೆ, ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ ಎಳ್ಳು ಬೀರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.