ಸಾಸ್ವೆಹಳ್ಳಿ: ರಾಜ್ಯ ಹೆದ್ದಾರಿ 115ರ ಚಿಕ್ಕಬಾಸೂರು ತಾಂಡಾ ಮತ್ತು ಉಜ್ಜನಿಪುರ ಮಧ್ಯದಲ್ಲಿರುವ ‘ಆನೆ ಬಿದ್ದ ಹಳ್ಳ’ದ ಬಳಿ ಇತ್ತೀಚೆಗೆ ನಡೆಸಿದ ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆಯಿಂದ ಕೂಡಿದೆ. ಕಾಮಗಾರಿ ನಡೆದ ಮೂರು ತಿಂಗಳಲ್ಲೇ ಡಾಂಬರ್ ಕಿತ್ತುಹೋಗಿದೆ.
ರಸ್ತೆ ಹಾಳಾಗಿರುವುದರ ಜೊತೆಗೆ ಹಳ್ಳದ ಬಳಿ ತಡೆಗೋಡೆಯನ್ನು ಸಹ ಸರಿಯಾಗಿ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಈ ಮಾರ್ಗದಲ್ಲಿ ಓಡಾಡುವ ಸಾರ್ವಜನಿಕರಿಗೆ ನಿತ್ಯ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಈ ಹಳ್ಳಕ್ಕೆ ಸರಿಯಾದ ಸೇತುವೆ ನಿರ್ಮಿಸಿ, ರಸ್ತೆಯನ್ನು ಎತ್ತರಿಸಬೇಕು.
–ಚಿಕ್ಕಬಾಸೂರು ಮತ್ತು ಉಜ್ಜನಿಪುರ ಗ್ರಾಮಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.