
ಹರಿಹರ: ಕ್ರಿಯಾತ್ಮಕ ಪಾಲ್ಗೊಳ್ಳುವಿಕೆ ಮತ್ತು ನಿರಂತರ ಪ್ರಯತ್ನದಿಂದಾಗಿ ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾಧ್ಯ ಎಂದು ಗ್ರಾಸಿಂ ಇಂಡಸ್ಟ್ರೀಸ್ ಲಿ. ಕಂಪನಿ ಉಪಾಧ್ಯಕ್ಷ ಆನಂದ ಕಾಮೋಜಿ ಹೇಳಿದರು.
ನಗರದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಕಿಮ್) ಸಂಸ್ಥೆಯಲ್ಲಿ ಶನಿವಾರ ನಡೆದ ಅಂತರ ಕಾಲೇಜು ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಹಬ್ಬವಾದ ಕಿಂಪೋಸಿಯಮ್–2026ನ್ನು ಉದ್ಘಾಟಿಸಿ ಮಾತನಾಡಿದರು.
ಯಶಸ್ಸಿನ ಹಿಂದೆ ಓಡುವುದರಿಂದ ಸಾಧಕರಾಗುವುದಿಲ್ಲ. ಇದಕ್ಕಾಗಿ ಪಾಲ್ಗೊಳ್ಳುವಿಕೆ ಮತ್ತು ನಿರಂತರತೆಯ ಅಗತ್ಯವಿದೆ. ದಿನ ದಿನಕ್ಕೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳಬೇಕು ಎಂದರು.
ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ನಡುವೆ ಸಂವಹನ, ಕೌಶಲ, ಅನುಭವದ ಹಂಚಿಕೆ ಮಾಡುವ ಸಲುವಾಗಿ ಈ ಸಮಾರಂಭ ಆಯೋಜಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಶ್ರೀಧರ್ ವೈಠಿಯಾನಾಥನ್ ಹೇಳಿದರು.
ಬೆಂಗಳೂರಿನ ಸಿಂಬಯೋಸಿಸ್, ನಾಗಪುರದ ಐಐಎಂಬಿ, ಐಎಂಟಿ ಸೇರಿದಂತೆ ಮೈಸೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆಯ ಪ್ರತಿಷ್ಠಿತ ಸಂಸ್ಥೆಗಳ 80 ಎಂಬಿಎ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿ ಸಂಯೋಜಕ ಯಶ್ವಂತ್ ರಾಮ್ ಕುಮಾರ್ ಚುಕ್ಕ ಮಾತನಾಡಿದರು.
ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಎನ್. ನಿಕಿತಾ ಪ್ರಾರ್ಥಿಸಿದರು. ರಿಶಾಂಕ್ ಮತ್ತು ಹರ್ಷಿತಾ ನಿರೂಪಿಸಿದರು. ಅಧ್ಯಾಪಕ ಸಂಯೋಜಕ ಗಿರೀಶ್ ವೈ.ಎಂ. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.