ADVERTISEMENT

ಗ್ರಾಮ ಠಾಣಾ ವಿಸ್ತರಣೆಗೆ ಹೋರಾಟ ಅನಿವಾರ್ಯ: ತೇಜಸ್ವಿ ಪಟೇಲ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:42 IST
Last Updated 6 ಸೆಪ್ಟೆಂಬರ್ 2024, 15:42 IST
ಕಾರಿಗನೂರಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ತೇಜಸ್ವಿ ಪಟೇಲ್ ಮಾತನಾಡಿದರು
ಕಾರಿಗನೂರಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ತೇಜಸ್ವಿ ಪಟೇಲ್ ಮಾತನಾಡಿದರು   

ತ್ಯಾವಣಿಗೆ: ‘ಬ್ರಿಟಿಷರ ಕಾಲದಿಂದ ಈಗಿನವರೆಗೆ ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಣೆ ಆಗಿಲ್ಲ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಆದ್ದರಿಂದ ಗ್ರಾಮ ಠಾಣಾ ವಿಸ್ತರಣೆಗಾಗಿ ಹೋರಾಟ ಮಾಡುವುದು ಅನಿವಾರ್ಯ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಹೇಳಿದರು.

ಸಮೀಪದ ಕಾರಿಗನೂರಿನಲ್ಲಿ ಗ್ರಾಮ ಪಂಚಾಯಿತಿ ಅಯೋಜಿಸಿದ್ದ ಗ್ರಾಮ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

‘ಇ–ಸ್ವತ್ತು ಪದ್ಧತಿ ಬರುವವರೆಗೂ ತೊಂದರೆ ಇರಲಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಈಗ ಇ–ಸ್ವತ್ತು ಅಗತ್ಯ ದಾಖಲೆ ಆಗುತ್ತಿದೆ. ಮನವಿ ನೀಡಿದರೆ ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಿಸುವುದಾಗಿ ಹೇಳುತ್ತಾರೆ. ಆದರೆ ಕಾರ್ಯರೂಪಕ್ಕೆ ಬರುತ್ತಿಲ್ಲ’ ಎಂದರು.

‘ಆಡಳಿತ ಯಂತ್ರಕ್ಕೆ ಹೋರಾಟದ ಮೂಲಕ ಬಿಸಿ ಮುಟ್ಟಿಸಬೇಕು. ಜಡ ವ್ಯವಸ್ಥೆಯಲ್ಲಿ ಸೌಲಭ್ಯ ಪಡೆಯುವುದು ಕಷ್ಟದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

‘2016ರಲ್ಲಿ ರಾಜ್ಯ ಸರ್ಕಾರ ಗ್ರಾಮ ಠಾಣಾ ವಿಸ್ತರಣೆಗೆ ಸುತ್ತೋಲೆ ಹೊರಡಿಸಿದೆ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಗೋಪಾಲ್ ಕೃಷ್ಣ ಹೇಳಿದರು.

‘ಗ್ರಾಮೀಣ ಜನರು ಮನೆ ಕಟ್ಟಿಕೊಳ್ಳಲು ಇ–ಸ್ವತ್ತು ಸಹಕಾರಿ. ಆದ್ದರಿಂದ ಗ್ರಾಮ ಠಾಣಾ ವಿಸ್ತರಣೆ ಸೂಕ್ತ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ಪಟೇಲ್ ತಿಳಿಸಿದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾಂಕ, ಉಪಾಧ್ಯಕ್ಷೆ‌ ಹೇಮಾವತಿ, ಸದಸ್ಯರಾದ ಚೇತನ್ ಕುಮಾರ್, ಶರತ್, ಸಂದೀಪ್, ಪ್ರವೀಣ್, ಕಿರಣ್, ಮಾಜಿ ಸದಸ್ಯರಾದ ಮುರುಗೇಶ್, ಜಯಪ್ಪ ಗೌಡ್ರು, ಕಂದಾಯ ನಿರೀಕ್ಷಕ ಬಸಣ್ಣ, ವಿ‌ಎ ಬಸವರಾಜ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.