ADVERTISEMENT

ದಾವಣಗೆರೆ | ನಕಲಿ ಬಂಗಾರ ತೋರಿಸಿ ವಂಚನೆ: ಬಂಧನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 5:20 IST
Last Updated 30 ಡಿಸೆಂಬರ್ 2021, 5:20 IST
ನಕಲಿ ಬಂಗಾರ ತೋರಿಸಿ ಹಣ ದೋಚಿದ್ದ ಆರೋಪಿಗಳನ್ನು ಬಂಧಿಸಿರುವ ಹರಪನಹಳ್ಳಿ ಪೊಲೀಸರ ತಂಡ
ನಕಲಿ ಬಂಗಾರ ತೋರಿಸಿ ಹಣ ದೋಚಿದ್ದ ಆರೋಪಿಗಳನ್ನು ಬಂಧಿಸಿರುವ ಹರಪನಹಳ್ಳಿ ಪೊಲೀಸರ ತಂಡ   

ಹರಪನಹಳ್ಳಿ: ನಕಲಿ ಬಂಗಾರ ತೋರಿಸಿ ಗ್ರಾಮ ಪಂಚಾಯಿತಿ ಸದಸ್ಯನಿಂದ ಹಣ ದೋಚಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ₹ 1.30 ಲಕ್ಷ ನಗದು ಮತ್ತು ಮೊಬೈಲ್ ಅನ್ನು ವಶ‍ಪಡಿಸಿಕೊಂಡಿದ್ದಾರೆ.

ಯಲ್ಲಾಪುರ ಕೊರಚರಹಟ್ಟಿಯ ಉಮೇಶ ಕವಾಡಿ, ಮೆಂಡ್ರಿಗುತ್ತಿ ಮಂಜಪ್ಪ, ಸೊರಬ ತಾಲ್ಲೂಕು ಆನವಟ್ಟಿ ಗ್ರಾಮದ ಗದಿಗೆಪ್ಪ ಬಂಧಿತರು. ಡಿ.12ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಂ.ರಾಜೇಂದ್ರ ಎಂಬುವವರನ್ನು ಸೇವಾನಗರ ಕ್ರಾಸ್ ಬಳಿ ಕರೆಯಿಸಿಕೊಂಡು, ನಕಲಿ ಬಂಗಾರ ತೋರಿಸಿ ₹ 2.05 ಲಕ್ಷ ದೋಚಿಕೊಂಡು ಪರಾರಿಯಾಗಿದ್ದರು.

ಡಿವೈಎಸ್ಪಿ ಹಾಲಮೂರ್ತಿ ರಾವ್ ಮಾರ್ಗದರ್ಶನದಲ್ಲಿ ಸಿಪಿಐ ನಾಗರಾಜ್ ಎಂ.ಕಮ್ಮಾರ್, ಪಿಎಸ್ಐ ಎಚ್.ಎಸ್.ಪ್ರಶಾಂತ್ ಅವರ ನೇತೃತ್ವದಲ್ಲಿ ಚಂದ್ರು, ವಾಸುದೇವನಾಯ್ಕ, ರವಿ ದಾದಾಪುರ ತಂಡ ಕಾರ್ಯಾಚರಣೆ ನಡೆಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.