ADVERTISEMENT

ಸಿದ್ದರಾಮಯ್ಯ ಅಮೃತ ಮಹೋತ್ಸವ: ಶುಚಿ ರುಚಿಯಾದ ಊಟ ಸವಿದ ಲಕ್ಷಾಂತರ ಮಂದಿ

ಪುಲಾವ್, ಬಿಸಿಬೇಳೆ ಬಾತ್, ಮೈಸೂರು ಪಾಕ್‌ನ ಸವಿರುಚಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 14:17 IST
Last Updated 3 ಆಗಸ್ಟ್ 2022, 14:17 IST
ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಊಟ ಸವಿದ ಕಾರ್ಯಕರ್ತರು.
ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಊಟ ಸವಿದ ಕಾರ್ಯಕರ್ತರು.   

ದಾವಣಗೆರೆ: ಸಿದ್ದರಾಮಯ್ಯ–75 ಅಮೃತ ಮಹೋತ್ಸವಕ್ಕೆ ರಾಜ್ಯದ ವಿವಿಧಡೆಯಿಂದ ಬಂದಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಊಟದ ಸವಿದರು.

ಬುಧವಾರ ಬೆಳಿಗ್ಗೆಯಿಂದಲೇ ಬಂದ ಜನರಿಗೆ ಇಲ್ಲಿನ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಶುಚಿ ರುಚಿಯಾದ ಭೋಜನ ತಯಾರಿಸಿದ್ದು, ಲಕ್ಷಾಂತರ ಮಂದಿ ಊಟ ಮಾಡಿದರು.

ಪುಲಾವ್‌, ಮೊಸರನ್ನ, ಬಿಸಿಬೇಳೆ ಬಾತ್ ಹಾಗೂ ಮೈಸೂರು ಪಾಕ್‌ ಅನ್ನು ಸವಿದು ಖುಷಿಪಟ್ಟರು. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು. 6 ಲಕ್ಷಕ್ಕೂ ಹೆಚ್ಚು ಮೈಸೂರು ಪಾಕ್ ಸಿದ್ಧಪಡಿಸಿದ್ದು ವಿಶೇಷ.

ADVERTISEMENT

ವೇದಿಕೆಯ ಎಡಭಾಗದಲ್ಲೇ 200ಕ್ಕೂ ಕೌಂಟರ್‌ಗಳಲ್ಲಿ ಊಟ ಬಡಿಸಿದರು. ಅಡಿಕೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದು, ಜನರು ಸರತಿ ಸಾಲಿನಲ್ಲಿ ನಿಂತು ಊಟ ಸವಿದರು. ರಾಜ್ಯವಲ್ಲದೇ ತಮಿಳುನಾಡು ಹಾಗೂ ಕೇರಳದಿಂದಲೂ ಬಾಣಸಿಗರನ್ನು ಕರೆತರಲಾಗಿತ್ತು.

‘ಸಿದ್ದರಾಮಯ್ಯ ಅನ್ನಭಾಗ್ಯದ ಸರದಾರ. ಕಾರ್ಯಕ್ರಮದಲ್ಲೂ ಊಟ ಚೆನ್ನಾಗಿದೆ. ಇಷ್ಟೊಂದು ಜನಕ್ಕೆ ಊಟ ಕೊಟ್ಟಿರುವುದು ಸುಲಭದ ಮಾತಲ್ಲ. ಮೈಸೂರು ಪಾಕ್ ಚೆನ್ನಾಗಿದೆ’ ಎಂದು ಹಾವೇರಿಯ ರೈತ ಕುಮಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.