ADVERTISEMENT

ದಾವಣಗೆರೆ: ಜ.5 ರಿಂದ ಸೋಮೇಶ್ವರೋತ್ಸವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 16:26 IST
Last Updated 3 ಜನವರಿ 2024, 16:26 IST

ದಾವಣಗೆರೆ: ಗೋಣಿವಾಡ ಗ್ರಾಮದ ಶ್ರೀ ಸೋಮೇಶ್ವರ ವಸತಿಯುತ ವಿದ್ಯಾಲಯ ಮತ್ತು ಶ್ರೀ ಸೋಮೇಶ್ವರ ಸರ್‌ಎಂವಿ ಎಲೈಟ್ ಓಲಂಪಿಯಾಡ್ ಸ್ಕೂಲ್‌ನಲ್ಲಿ ಜ.5 ಮತ್ತು 6ರಂದು ಸಂಜೆ 5:45ಕ್ಕೆ ಸೋಮೇಶ್ವರೋತ್ಸವ-2024 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜ.5ರಂದು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನಿಧ್ಯದಲ್ಲಿ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯಅತಿಥಿಗಳಾಗಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜಿ. ಕೊಟ್ರೇಶ್, ಸರ್ ಎಂ.ವಿ. ಕಾಲೇಜಿನ ಉಪ ನಿರ್ದೇಶಕ ಎಸ್.ಜೆ. ಶ್ರೀಧರ್, ನಿವೃತ್ತ ಸೇನಾಧಿಕಾರಿ ಡಾ. ಹಾಲೇಶ್, ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ವಾಲ್ಮೀಕಿ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾದ ಲಕ್ಷ್ಮಿದೇವಿ ಮತ್ತು ಬಿ. ವೀರಣ್ಣ ಅವರಿಗೆ ‘ಸೋಮೇಶ್ವರ ಸಿರಿ’ ಗೌರವ ಪ್ರದಾನ ಮಾಡಲಾಗುವುದು ಎಂದು ಶಾಲೆಯ ಪ್ರಾಂಶುಪಾಲರಾದ ಎನ್. ಪ್ರಭಾವತಿ ತಿಳಿಸಿದರು.

ಜ.6ರಂದು ನಡೆಯುವ ಸಂಗೀತೋತ್ಸವವನ್ನು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಉದ್ಘಾಟಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ್ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಎಸ್. ಬಸವಂತಪ್ಪ, ಮಾಜಿ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ.ಜೆ. ಮುರುಗೇಶ್ ಆರಾಧ್ಯ, ಆಡಿಟರ್ ಉಮೇಶ್ ಶೆಟ್ಟಿ, ಮಾಜಿ ನಿರ್ದೇಶಕ ಎಪಿಎಂಸಿ ಟಿ.ಕೆ. ವೀರಪ್ಪ ಭಾಗವಹಿಸಲಿದ್ದಾರೆ. ಸೋಮೇಶ್ವರ ವಿದ್ಯಾಲಯದ ಅಧ್ಯಕ್ಷ ಎಚ್.ಆರ್. ಅಶೋಕ್ ರೆಡ್ಡಿ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.98.72ಅಂಕ ಪಡೆದ ಕೆ.ಎಸ್. ಕ್ರೀನಾ ಇವರಿಗೆ ‘ಸಾಧನಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂತರ ನಡೆಯುವ ಸಂಗೀತೋತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ಎಂ.ಡಿ. ಪಲ್ಲವಿ ಹಾಡಿ ರಂಜಿಸಲಿದ್ದಾರೆ ಎಂದು ವಿವರಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಪಿ.ಆರ್. ಮಾಲಾ, ಆಡಳಿತಾಧಿಕಾರಿ ಹರೀಶ್ ಬಾಬು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.