ಮಲೇಬೆನ್ನೂರು: ಪಟ್ಟಣದ ಪೊಲೀಸ್ ಠಾಣೆಗೆ ಈಚೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ವಸತಿ ಗೃಹ ಪರಿಶೀಲಿಸಿದರು.
ಮಳೆಯ ನಡುವೆ ಠಾಣೆಯ ಆವರಣದಲ್ಲಿನ ಕಿರು ಉದ್ಯಾನ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆಯ ಉದ್ದೇಶದಲ್ಲಿ ಠಾಣೆಯ ಆವರಣದಲ್ಲಿ ಹೆಚ್ಚು ಹೂ, ಹಣ್ಣಿನ ಗಿಡ ನೆಡುವಂತೆ ಸೂಚಿಸಿದರು. ಬಳಿಕ ಕಚೇರಿಯ ಕಡತ ಪರಿಶೀಲಿಸಿದರು.
ಗ್ರಾಮಾಂತರ ಡಿವೈಎಸ್ಪಿ ಬಸವರಾಜ್, ಸಿಪಿಐ ಸುರೇಶ್ ಸಗರಿ, ಪಿಎಸ್‌ಐ ಪ್ರಭು ಕೆಳಗಿನಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.