ADVERTISEMENT

ದಾವಣಗೆರೆ: ಬಾಕಿ ಹಣ ಕೇಳಿದ್ದಕ್ಕೆ ಚೂರಿ ಇರಿತ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2025, 16:03 IST
Last Updated 17 ಫೆಬ್ರುವರಿ 2025, 16:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಾವಣಗೆರೆ: ಬಾಕಿ ಹಣ ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದ ಬೇತೂರು ರಸ್ತೆಯಲ್ಲಿ ನಡೆದಿದೆ.

ಅಯ್ಯಂಗಾರ್ ಬೇಕರಿಯ ಸಿದ್ದೇಶ್ (40 ) ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಮಂಜುನಾಥ ಚಾಕು ಇರಿದ ಆರೋಪಿ.

ADVERTISEMENT

ಸಿದ್ದೇಶ್ ಅವರ ಬೇಕರಿಯಲ್ಲಿ ಮಂಜುನಾಥ ₹115 ಮೊತ್ತದ ತಿನಿಸುಗಳನ್ನು ಖರೀದಿಸಿದ್ದ. ಹಣ ಕೇಳಿದ್ದರಿಂದ ಮಾತಿಗೆ ಮಾತು ಬೆಳೆದು ಸಿದ್ದೇಶ್‌ಗೆ ಮಂಜುನಾಥ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಸಿದ್ದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.