ADVERTISEMENT

ಕಾಶಿನಾಥ್‌ ಬೀಳಗಿಗೆ ರಾಜ್ಯಮಟ್ಟದ ಮೇಯರ್‌ ಕಪ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 6:11 IST
Last Updated 19 ಫೆಬ್ರುವರಿ 2021, 6:11 IST
ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮೇಯರ್ ಕಪ್ ಕುಸ್ತಿ ಪಂದ್ಯಾವಳಿ–2021ರ ಫೈನಲ್ ಪಂದ್ಯಾವಳಿಯಲ್ಲಿ ವಿಜೇತರಾದ ಜಮಖಂಡಿಯ ಕಾಶೀನಾಥ್ ಬೀಳಗಿ (ಕೆಂಪು ಪೋಷಾಕು) ಅವರಿಗೆ ಮೇಯರ ಬಿ ಜಿ ಅಜಯ್‌ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ದ್ವಿತೀಯ ಸ್ಥಾನ ಪಡೆದ ಸರ್ಜಿರಾವ್ ಬಿ (ನೀಲಿ ಪೋಷಾಕು), ಕುಸ್ತಿ ತರಬೇತುದಾರ ಶಿವಾನಂದ, ಪಾಲಿಕೆ ಸದಸ್ಯ ವಿರೇಶ್ ಅವರೂ ಇದ್ದರು.
ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮೇಯರ್ ಕಪ್ ಕುಸ್ತಿ ಪಂದ್ಯಾವಳಿ–2021ರ ಫೈನಲ್ ಪಂದ್ಯಾವಳಿಯಲ್ಲಿ ವಿಜೇತರಾದ ಜಮಖಂಡಿಯ ಕಾಶೀನಾಥ್ ಬೀಳಗಿ (ಕೆಂಪು ಪೋಷಾಕು) ಅವರಿಗೆ ಮೇಯರ ಬಿ ಜಿ ಅಜಯ್‌ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ದ್ವಿತೀಯ ಸ್ಥಾನ ಪಡೆದ ಸರ್ಜಿರಾವ್ ಬಿ (ನೀಲಿ ಪೋಷಾಕು), ಕುಸ್ತಿ ತರಬೇತುದಾರ ಶಿವಾನಂದ, ಪಾಲಿಕೆ ಸದಸ್ಯ ವಿರೇಶ್ ಅವರೂ ಇದ್ದರು.   

ದಾವಣಗೆರೆ: ಗೆಳೆಯರ ಬಳಗ ಮತ್ತು ವಿವಿಧ ಸಂಘಟನೆಗಳು ಆಂಜನೇಯ ಬಡಾವಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮೇಯರ್ ಕಪ್‌ ಕುಸ್ತಿ ಪಂದ್ಯಾವಳಿಯಲ್ಲಿ ದಾವಣಗೆರೆಯ ಕಾಶಿನಾಥ ಬೀಳಗಿ ಮೇಯರ್‌ ಕಪ್‌ ಗೆದ್ದಿದ್ದಾರೆ.

ವಿವಿಧ ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾಶಿನಾಥ್‌ಗೆ ಈ ಕಪ್‌ ನೀಡಲಾಯಿತು.

ಫಲಿತಾಂಶ: 42 ಕೆ.ಜಿ. ವಿಭಾಗ: ದಾವಣಗೆರೆಯ ಯುವರಾಜ್‌ ಎಚ್‌. ಪ್ರಥಮ, ತಿಮ್ಮೇಶ್‌ ದ್ವಿತೀಯ, ಮೋಹನ್‌ರಾಜ್‌ ಮತ್ತು ಪರಶುರಾಮ್‌ ತೃತೀಯ.

ADVERTISEMENT

50 ಕೆ.ಜಿ. ವಿಭಾಗ: ಜಮಖಂಡಿಯ ಬಸವರಾಜ್‌ ಸಂತಿ ಪ್ರಥಮ, ದಾವಣಗೆರೆಯ ತಿಮ್ಮೇಶ್‌ ದ್ವಿತೀಯ, ರಾಣೆಬೆನ್ನೂರಿನ ದಿಲೀಪ್‌ ಕಾಟೆ, ದಾವಣಗೆರೆಯ ಪರಶುರಾಮ್‌ ತೃತೀಯ.

60 ಕೆ.ಜಿ. ವಿಭಾಗ: ಭದ್ರಾವತಿಯ ಪ್ರತೀಕ ಬಿ.ಎಸ್‌. ಪ್ರಥಮ, ಕಂಪಿಯ ಭೀಮಲಿಂಗೇಶ್ವರ ದ್ವಿತೀಯ, ಹರಿಹರದ ಸುಶೀಲ ಕುಮಾರ್‌, ಹರಪನಹಳ್ಳಿಯ ಕೂರವರ ಸಂಜೀವ ತೃತೀಯ.

70 ಕೆ.ಜಿ. ವಿಭಾಗ: ದಾವಣಗೆರೆಯ ಕಾಶಿನಾಥ ಬೀಳಗಿ ಪ್ರಥಮ, ಜಮಖಂಡಿಯ ಸರ್ಜಿರಾವ್‌ ಬರಗಿ ದ್ವಿತೀಯ, ಶಿವಮೊಗ್ಗದ ರಂಗನಾಥ್, ಬಾಗಲಕೋಟೆಯ ಕೆಂಪಣ್ಣ ಗೌಡ ಕೆಂಪನ್ನವರ ತೃತೀಯ.

80 ಕೆ.ಜಿ. ವಿಭಾಗ: ದಾವಣಗೆರೆಯ ವೆಂಕಟೇಶ್‌ ಪ್ರಥಮ, ಜಮಖಂಡಿಯ ಬಸವರಾಜ ಪಾಟೀಲ ದ್ವಿತೀಯ, ಶಿವಮೊಗ್ಗದ ಸಂಜಯ್‌, ಜಮಖಂಡಿಯ ಲಕ್ಷ್ಮಣ ಸಾವಳಗಿ ತೃತೀಯ.

82 ಕೆ.ಜಿ. ವಿಭಾಗ: ದಾವಣಗೆರೆಯ ಮಧುಸೂದನ್‌ ಪ್ರಥಮ, ಶಿವಮೊಗ್ಗದ ಪಂಕಜ ಕುಮಾರ್‌ ದ್ವಿತೀಯ, ಬೆಳಗಾವಿಯ ಬಸವರಾಜ್‌ ಹುದಲಿ, ಹರಿಹರದ ಗಿರೀಶ್‌ ತೃತೀಯ.

86 ಕೆ.ಜಿ. ವಿಭಾಗ: ಹರಪನಹಳ್ಳಿಯ ಪ್ರಶಾಂತ್‌ ಪ್ರಥಮ, ಕೆಎಸ್‌ಪಿಯ ಎಚ್‌.ಎನ್‌. ಚನ್ನಾಳ ದ್ವಿತೀಯ, ಕೆಎಸ್‌ಪಿಯ ಎಸ್‌.ಜಿ. ಹಿರೇಮಠ, ಬೆಂಗಳೂರಿನ ಟಿ.ಕೆ. ಚಂದ್ರಪ್ಪ ತೃತೀಯ.

92 ಕೆ.ಜಿ. ವಿಭಾಗ: ಕೆಎಸ್‌ಪಿಯ ಎಲ್‌.ಎಂ. ಯಲಶೆಟ್ಟಿ ಪ್ರಥಮ, ಶಿವಮೊಗ್ಗದ ಆನಂದ ಎಲ್‌. ದ್ವಿತೀಯ, ಬೆಳಗಾವಿಯ ಸಾರವ ಪೂಜಾರಿ, ಚಿಕ್ಕೋಡಿಯ ಕೆಂಪಣ್ಣ ಜೋಗೆ ತೃತೀಯ.

97 ಕೆ.ಜಿ. ವಿಭಾಗ: ಕೆಎಸ್‌ಪಿಯ ಎಂ.ವೈ. ಪಾಟೀಲ ಪ್ರಥಮ, ದಾವಣಗೆರೆಯ ಅಲಿ ಹುಸೇನ್‌ ದ್ವಿತೀಯ, ಕೆಎಸ್‌‍ಪಿಯ ಎನ್‌. ಕೆಂಚಪ್ಪ, ಹರಿಹರದ ರಂಗನಾಥ ತೃತೀಯ.

97 ಕೆ.ಜಿ.ಗಿಂತ ಮೇಲಿನವರ ವಿಭಾಗ: ಬಾಗಲಕೋಟೆಯ ಅರುಣ ಪಾಟೀಲ ಪ್ರಥಮ, ಕೆಎಸ್‌ಪಿಯ ಎಸ್‌ಆರ್‌.ಯಲಶೆಟ್ಟಿ ದ್ವಿತೀಯ, ದಾವಣಗೆರೆಯ ಚಂದ್ರಶೇಖರ ಎಸ್‌., ರಾಣೆಬೆನ್ನೂರಿನ ಕಿರಣ ಮೊಡ್ಲೇರಿ ತೃತೀಯ.

ಏಪ್ರಿಲ್‌ನಲ್ಲಿ ದೊಡ್ಡಮಟ್ಟದ ಸ್ಪರ್ಧೆ

20 ವರ್ಷಗಳ ಹಿಂದೆ ಮೈಸೂರಿನಲ್ಲಿ ಮೇಯರ್‌ ಕಪ್‌ ಕುಸ್ತಿ ಪಂದ್ಯಾವಳಿ ನಡೆಯುತ್ತಿತ್ತು. ಇದೀಗ ದಾವಣಗೆರೆಯಲ್ಲಿ ನಡೆಯುತ್ತಿರುವುದು ಖುಷಿಯ ವಿಚಾರ. ಏಪ್ರಿಲ್‌ ಮೊದಲ ವಾರದಲ್ಲಿ ದೊಡ್ಡಮಟ್ಟದಲ್ಲಿ ಕುಸ್ತಿ ಪಂದ್ಯಾಟವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುವುದು ಎಂದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ತಿಳಿಸಿದರು.

ಕುಸ್ತಿ ವಿಜೇತರಿಗೆ ಕಪ್‌ ವಿತರಿಸಿ ಅವರು ಮಾತನಾಡಿದರು.

ಪೈಲ್ವಾನ್‌ ವೀರೇಶ್‌, ಬಿ. ವೀರಣ್ಣ, ಸ್ಟಾರ್‌ ವೀರಣ್ಣ, ಡಿವೈಎಸ್ಪಿ ಪ್ರಕಾಶ್‌, ತರಬೇತುದಾರರಾದ ಶ್ರೀನಿವಾಸ ಗೌಡ, ಮಂಜುನಾಥ, ಶಿವಾನಂದ, ಸಂಘಟಕರಾದ ಕಾರ್ತಿಕ್‌ ಕಾಟೆ, ಮಲ್ಲಪ್ಪ ಪಾಟೀಲ, ಕಿರಣ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.