ADVERTISEMENT

ರಾಜ್ಯಮಟ್ಟದ ದೃಶ್ಯಕಲಾ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 4:49 IST
Last Updated 6 ಆಗಸ್ಟ್ 2022, 4:49 IST

ದಾವಣಗೆರೆ: ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ 2021-22ನೇ ಸಾಲಿನ ರಾಜ್ಯ ಮಟ್ಟದ ಫೆಲೋಶಿಪ್ ಪ್ರದಾನ ಸಮಾರಂಭ ಹಾಗೂ ವಿದ್ಯಾರ್ಥಿ ಕಲಾ ವಿಚಾರಸಂಕಿರಣ ಆಗಸ್ಟ್‌ 6 ಮತ್ತು 7ರಂದು ನಡೆಯಲಿದೆ ಎಂದುಅಕಾಡೆಮಿಯ ಸದಸ್ಯ ಸಂಚಾಲಕರಾದ ಲಕ್ಷ್ಮೀ ಮೈಸೂರು ಹೇಳಿದರು.

ಇಲ್ಲಿನ ಹೈಸ್ಕೂಲ್‌ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರ (ಡಯಟ್‌) ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಕಾಡೆಮಿಯಿಂದ ದಾವಣಗೆರೆಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಕಾಸರಗೋಡಿನ ಕಲಾವಿದರಾದ ಪಿ.ಎಸ್. ಪುಂಚಿತ್ತಾಯ, ಕಲಬುರ್ಗಿಯ ಪ್ರೊ. ವಿ.ಜಿ. ಅಂದಾನಿ, ರಾಯಚೂರಿನ ಎಚ್.ಎಚ್. ಮ್ಯಾದಾರ್, ಧಾರವಾಡದ ಎನ್.ಆರ್. ನಾಯ್ಕರ್, ತುಮಕೂರಿನ ಪ್ರಭು ಹರಸೂರು ಹಾಗೂ ಮೈಸೂರಿನ ಹರಿ ಅವರಿಗೆ ಫೆಲೊಶಿಪ್ ಪ್ರದಾನ ಮಾಡಲಾಗುವುದು. ಫೆಲೊಶಿಫ್‌ ₹ 2 ಲಕ್ಷ ನಗದು ಪುರಸ್ಕಾರ ಹಾಗೂ ಫಲಕ ಒಳಗೊಂಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದಾವಣಗೆರೆಯ ಸಂಸ್ಕಾರ ಭಾರತಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್‌ 6ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆ ನಡೆಯಲಿದ್ದು, ಹಿರಿಯ ಕಲಾವಿದ ವಿಜಯ ಸಿಂಧೂರ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ‍ಪ್ರೊ. ಬಿ.ಡಿ. ಕುಂಬಾರ, ಚಿತ್ರನಟ ಸುಚೇಂದ್ರ ಪ್ರಸಾದ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.ಬಳಿಕ ದೃಶ್ಯಕಲಾ ವಿಚಾರಸಂಕಿರಣ ನಡೆಯಲಿದ್ದು, ವಿವಿಧೆಡೆಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ದೃಶ್ಯಕಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆ.7ರಂದು ಸಂವಾದ ಹಾಗೂ ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷ ಮಹಲಿಂಗಪ್ಪ ಎ.,ಸಹ ಕಾರ್ಯದರ್ಶಿ ನಾಗಭೂಷಣ್, ಸದಸ್ಯ ತಿಪ್ಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.