ADVERTISEMENT

ದೂರದೃಷ್ಟಿಯ ಚಿಂತನೆ ಇರಲಿ: ಪಿಎಸ್‍ಐ ಕುಮಾರ್

ಹೊನ್ನಾಳಿ ಎಸ್‍ಎಂಎಸ್‍ಎಫ್ ಕಾಲೇಜಿನಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:19 IST
Last Updated 8 ನವೆಂಬರ್ 2025, 6:19 IST
ಹೊನ್ನಾಳಿ ಎಸ್‍ಎಂಎಸ್‍ಎಫ್ ಕಾಲೇಜಿನಲ್ಲಿ ನಡೆದ ವಿವಿಧ ವೇದಿಕೆಗಳಿಗೆ ಚಾಲನೆ ಸಮಾರಂಭವನ್ನು ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಹೊನ್ನಾಳಿ ಎಸ್‍ಎಂಎಸ್‍ಎಫ್ ಕಾಲೇಜಿನಲ್ಲಿ ನಡೆದ ವಿವಿಧ ವೇದಿಕೆಗಳಿಗೆ ಚಾಲನೆ ಸಮಾರಂಭವನ್ನು ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಹೊನ್ನಾಳಿ: ‘ವಿದ್ಯಾರ್ಥಿಗಳಿಗೆ ದೂರದೃಷ್ಟಿಯ ಚಿಂತನೆ ಇರಬೇಕು. ಹತ್ತು ವರ್ಷ ಮುಂಚಿತವಾಗಿ ಯೋಚನೆ ಮಾಡುವುದನ್ನು ಕಲಿಯಬೇಕು. ಪ್ರತಿ ಕ್ಷಣವೂ ಮುಂದೇನು ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕು’ ಎಂದು ಪಿಎಸ್‍ಐ ಕುಮಾರ್ ಹೇಳಿದರು.

ಇಲ್ಲಿನ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‍ಎಸ್‍ಎಸ್ ಮತ್ತು ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ನಮ್ಮ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿ, ಅದಕ್ಕೆ ತಕ್ಕ ಶ್ರಮ ಹಾಕಬೇಕು. ಈಚೆಗೆ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ಎಚ್ಚರದಿಂದ ಇರಬೇಕು. ಹದಿಹರೆಯದರು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸುತ್ತವೆ. ರಕ್ತ ಮೇಲೆ ರಕ್ತ ಚೆಲ್ಲಬೇಡಿ, ಒಂದು ಜೀವ ಉಳಿಸಲು ಅದನ್ನು ನೀಡಿ. ಹೆಲ್ಮೆಟ್ ಹಾಕಿ ಸಂಭವನೀಯ ಅಪಘಾತ ತಪ್ಪಿಸಿ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಜನೆಯೇ ಮುಖ್ಯ ಉದ್ದೇಶವಾಗಿರಬೇಕು. ಹೊರಗೆ ಆಡುವ ಮಾತುಗಳು ಹರಟೆಯಾಗುತ್ತವೆ, ಆದರೆ ಅದೇ ವಿಚಾರಗಳನ್ನು ವೇದಿಕೆಗಳಲ್ಲಿ, ಚರ್ಚೆಗಳಲ್ಲಿ, ಸ್ಪರ್ಧೆಗಳಲ್ಲಿ ಪ್ರಸ್ತುತಪಡಿಸಿ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಬೇಕು’ ಎಂದು ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಧ್ಯಕ್ಷ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಕೆ. ನಾಗೇಶ್ ಮಾತನಾಡಿದರು. ಗೊಲ್ಲರಹಳ್ಳಿ ಮಂಜುನಾಥ್ ಉಪನ್ಯಾಸ ನೀಡಿದರು. ವಿದ್ಯಾಪೀಠದ ನಿರ್ದೇಶಕ ಎಂ. ಮಾದಪ್ಪ, ಸಾಂಸ್ಕೃತಿಕ ಸಂಚಾಲಕ ಕೆ. ಶಾಂತರಾಜ್, ಅಧೀಕ್ಷಕ ಲೋಕೇಶ್ವರ್, ಸಹಾಯಕ ಪ್ರಾಧ್ಯಾಪಕ ಬಸವರಾಜಪ್ಪ, ಕುಮಾರನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ನರಗಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಸತೀಶ್ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.