ADVERTISEMENT

ಸುತ್ತೂರು ಜಾತ್ರೆ: ಪ್ರಚಾರ ರಥ ಸಂಚಾರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 8:26 IST
Last Updated 16 ಡಿಸೆಂಬರ್ 2025, 8:26 IST
ಹೊನ್ನಾಳಿ ತಾಲ್ಲೂಕಿನ ಅರಕೆರೆಗೆ ಆಗಮಿಸಿದ ಸುತ್ತೂರು ಮಠದ ರಥಯಾತ್ರೆಯನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು
ಹೊನ್ನಾಳಿ ತಾಲ್ಲೂಕಿನ ಅರಕೆರೆಗೆ ಆಗಮಿಸಿದ ಸುತ್ತೂರು ಮಠದ ರಥಯಾತ್ರೆಯನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು   

ಹೊನ್ನಾಳಿ: ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಡಿಸೆಂಬರ್ 16 ರಿಂದ 21ರ ವರೆಗೆ ನಡೆಯಲಿರುವ ಶಿವರಾತ್ರೀಶ್ವರ ಶಿವಯೋಗಿ ಸ್ವಾಮೀಜಿಯ 1066ನೇ ಜಯಂತ್ಯುತ್ಸವ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ಶನಿವಾರ ಸಂಜೆ ಇಲ್ಲಿನ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಂಭ್ರಮದಿಂದ ಸ್ವಾಗತಿಸಿದರು. 

ಗ್ರಾಮಸ್ಥರು ಹಾಗೂ ಗ್ರಾಮದ ಮಹಿಳೆಯರು ಪೂರ್ಣಕುಂಭದೊಂದಿಗೆ ರಥವನ್ನು ಸ್ವಾಗತಿಸಿದರು. ಸುತ್ತೂರು ಶಾಲೆಯ ವಿದ್ಯಾರ್ಥಿಗಳು ಬ್ಯಾಡ್ ಸೆಟ್ ಬಾರಿಸುವ ಮೂಲಕ ಮೆರವಣಿಗೆಗೆ ರಂಗು ನೀಡಿದರು. ಬಳಿಕ ರಾಣೇಬೆನ್ನೂರಿಗೆ ರಥವನ್ನು ಬೀಳ್ಕೊಡಲಾಯಿತು ಎಂದು ಗ್ರಾಮದ ಮುಖಂಡ ಮಧುಗೌಡ ತಿಳಿಸಿದರು. 

ಸುತ್ತೂರು ಮಠ ಹಾಗೂ ಶಿವರಾತ್ರೀಶ್ವರ ಮಹಿಮೆ ಕುರಿತು ಹಿರೇಕಲ್ಮಠದಲ್ಲಿ ಧರ್ಮಸಭೆ ನಡೆಯಿತು. ಬ್ರಹ್ಮಕುಮಾರಿ ಜ್ಯೋತಿ ಅಕ್ಕ, ಮುಖಂಡ ಎಚ್.ಎ. ಉಮಾಪತಿ ಸೇರಿದಂತೆ ಹಲವರು ಭಾಗಿಯಾಗಿದ್ದರು. 

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಬಿ. ರಂಗನಾಥ್, ಮುಖಂಡರಾದ ಎಚ್.ಜಿ. ಬೆನಕಪ್ಪ ಗೌಡ, ಕೆ.ಜಿ. ಮಲ್ಲಿಕಾರ್ಜುನಗೌಡ, ಪ್ರವೀಣ್, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶಪ್ಪ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

2ಇಪಿ : 3ಇಪಿ : ಹೊನ್ನಾಳಿ ತಾಲ್ಲೂಕಿನ ಅರಕೆರೆಗೆ ಆಗಮಿಸಿದ ಸುತ್ತೂರು ಮಠದ ರಥಯಾತ್ರೆಯನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.