ADVERTISEMENT

ತ್ಯಾವಣಿಗೆ: ‘ನ್ಯಾನೊ ಯೂರಿಯಾ ಬಳಕೆಯಿಂದ ಹೆಚ್ಚು ಇಳುವರಿ’

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 5:59 IST
Last Updated 16 ಆಗಸ್ಟ್ 2025, 5:59 IST
ತ್ಯಾವಣಿಗೆ ಸಮೀಪದ ಅರೇಹಳ್ಳಿ ಗ್ರಾಮದಲ್ಲಿ ರೈತರಿಗೆ ಬುಧವಾರ ನ್ಯಾನೊ ಯೂರಿಯಾ ಬಳಕೆಯ ಪ್ರಾತ್ಯಕ್ಷಿಕೆ ನಡೆಯಿತು
ತ್ಯಾವಣಿಗೆ ಸಮೀಪದ ಅರೇಹಳ್ಳಿ ಗ್ರಾಮದಲ್ಲಿ ರೈತರಿಗೆ ಬುಧವಾರ ನ್ಯಾನೊ ಯೂರಿಯಾ ಬಳಕೆಯ ಪ್ರಾತ್ಯಕ್ಷಿಕೆ ನಡೆಯಿತು   

ತ್ಯಾವಣಿಗೆ: ನ್ಯಾನೊ ಯೂರಿಯಾ ಬಳಸುವುದರಿಂದ ರೈತರಿಗೆ ಹಣ ಮತ್ತು ಶ್ರಮ ಉಳಿತಾಯವಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅರುಣ್ ಕುಮಾರ್ ಎಸ್.ಎಚ್. ಹೇಳಿದರು.

ಸಮೀಪದ ಅರೇಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಭತ್ತದ ನಾಟಿ ಪ್ರಾತ್ಯಕ್ಷಿಕೆ ವೇಳೆ ಮಾತನಾಡಿದರು.

ಹರಳು ರೂಪದ ಯೂರಿಯಾ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ನ್ಯಾನೊ ಯೂರಿಯಾ ಬಳಕೆಯಿಂದ ಶೇ 80ರಷ್ಟು ಇಳುವರಿ ಸಾಧ್ಯ ಎಂದು ಉಪ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ತಿಳಿಸಿದರು.

ADVERTISEMENT

ಕೃಷಿ ವಿ.ವಿ. ವಿಸ್ತರಣಾ ಘಟಕದ ಗಂಗಪ್ಪಗೌಡ ಬಿರಾದರ್, ಬೇಸಾಯ ತಜ್ಞ ಶರಣಪ್ಪ ಕುರಿ, ರೈತರಾದ ಪರಮೇಶ್ವರಪ್ಪ, ಬಸವರಾಜಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.